Tuesday, May 7, 2024
Homeಕ್ರೀಡೆರಾಯಲ್‌ ಚಾಲೆಂಜರ್ಸ್ ಗೆಲುವಿಗೆ ಶುಭ ಹಾರೈಸಿದ ಕ್ರಿಸ್ ಗೇಲ್

ರಾಯಲ್‌ ಚಾಲೆಂಜರ್ಸ್ ಗೆಲುವಿಗೆ ಶುಭ ಹಾರೈಸಿದ ಕ್ರಿಸ್ ಗೇಲ್

spot_img
- Advertisement -
- Advertisement -

ಬೆಂಗಳೂರು; ಈ ಬಾರಿ ಕಪ್ ನಮ್ಮದೇ ಅಂತಾ ಆರ್ ಸಿಬಿ ಅಭಿಮಾನಿಗಳು‌ 3 ವರ್ಷಗಳಿಂದ ಹೇಳುತ್ತಲೇ ಬಂದಿದ್ದಾರೆ. ಅದರಲ್ಲೂ ಈ ಬಾರಿ ಆರ್ ಸಿಬಿ ಉತ್ತಮವಾಗಿ ಆಡ್ತಾ ಇರೋದರಿಂದ ಫ್ಯಾನ್ಸ್ ಅಂತೂ ಪಕ್ಕಾ ಕಪ್ ನಮ್ದೇ ಅಂತಾ ಫಿಕ್ಸ್ ಆಗಿ ಬಿಟ್ಟಿದ್ದಾರೆ.

ಇನ್ನು 3 ವರ್ಷಗಳ ಬಳಿಕ ಪ್ಲೇ ಆಫ್​ ಹಂತಕ್ಕೇರಿರುವ ಆರ್‌ಸಿಬಿ ತಂಡ, ಇಂದಿನ ಪಂದ್ಯದಲ್ಲಿ ಸನ್‌ರೈಸರ್ಸ್‌ ತಂಡವನ್ನು ಎದುರಿಸಲಿದೆ. ಈ ಪಂದ್ಯಕ್ಕೆ ಮುನ್ನ, ಆರ್‌ಸಿಬಿ ತಂಡ ಕಪ್ ಗೆಲ್ಲಲಿ ಎಂದು ತಂಡದ ಮಾಜಿ ಆಟಗಾರರಾಗಿರುವ ವೆಸ್ಟ್ ಇಂಡೀಸ್‌ನ ಸ್ಫೋಟಕ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್ ಹಾರೈಸಿದ್ದಾರೆ.

ಆರ್‌ಸಿಬಿ ತಂಡದ ನಾಯಕ ವಿರಾಟ್ ಕೊಹ್ಲಿ ನಿನ್ನೆಯಷ್ಟೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಅವರಿಗೆ ಎಲ್ಲೆಡೆಯಿಂದ ಶುಭಹಾರೈಕೆಗಳು ಹರಿದು ಬರುತ್ತಿವೆ. ಕ್ರಿಸ್ ಗೇಲ್ ವಿರಾಟ್ ಕೊಹ್ಲಿಗೆ ವಿಶೇಷ ರೀತಿಯಲ್ಲಿ ಶುಭಾಶಯ ತಿಳಿಸಿದ್ದಾರೆ.

‘ಹ್ಯಾಪಿ ಬರ್ತ್‌ಡೇ ಲೆಜೆಂಡ್ ವಿರಾಟ್ ಕೊಹ್ಲಿ. ನಿಮಗೆ ಶುಭಾಶಯಗಳು. ಆರ್‌ಸಿಬಿ ತಂಡಕ್ಕಾಗಿ ಕಪ್ ಗೆದ್ದು ತವರಿಗೆ ಕೊಂಡೊಯ್ಯಿರಿ’ ಎಂದು 41 ವರ್ಷದ ಕ್ರಿಸ್ ಗೇಲ್ ಶುಭಹಾರೈಸಿದ್ದಾರೆ. ಈ ಮೂಲಕ ಆರ್‌ಸಿಬಿ ತಂಡದ ಅಭಿಮಾನಿಗಳ ಹೃದಯವನ್ನು ಮತ್ತೊಮ್ಮೆ ಗೆದ್ದಿದ್ದಾರೆ. ಆರ್​ಸಿಬಿ ತಂಡ ಕೊನೆಯದಾಗಿ 2016ರಲ್ಲಿ ಐಪಿಎಲ್​ ಫೈನಲ್​ಗೇರಿ ರನ್ನರ್​ಅಪ್​ ಸ್ಥಾನಕ್ಕೆ ತೃಪ್ತಿಪಟ್ಟಾಗ ಕ್ರಿಸ್​ ಗೇಲ್​ ಕೂಡ ತಂಡದಲ್ಲಿದ್ದರು.

- Advertisement -
spot_img

Latest News

error: Content is protected !!