Friday, July 31, 2026
Homeಕ್ರೀಡೆಅಕ್ಟೋಬರ್ 3 ರಂದು ಕೋಲ್ಕತ್ತಾದಲ್ಲಿ ಭಾರತ ಮತ್ತು ಬ್ರೆಜಿಲ್ ನಡುವೆ ಫುಟ್‌ಬಾಲ್ ಪಂದ್ಯ

ಅಕ್ಟೋಬರ್ 3 ರಂದು ಕೋಲ್ಕತ್ತಾದಲ್ಲಿ ಭಾರತ ಮತ್ತು ಬ್ರೆಜಿಲ್ ನಡುವೆ ಫುಟ್‌ಬಾಲ್ ಪಂದ್ಯ

- Advertisement -
- Advertisement -

ಭಾರತೀಯ ಫುಟ್‌ಬಾಲ್ ಇತಿಹಾಸದಲ್ಲೇ ಮಹತ್ವದ ಮೈಲಿಗಲ್ಲೊಂದಕ್ಕೆ ಕೋಲ್ಕತ್ತಾ ಸಾಕ್ಷಿಯಾಗಲಿದೆ. ಐದು ಬಾರಿಯ ಫಿಫಾ ವಿಶ್ವಕಪ್ ಚಾಂಪಿಯನ್ ಬ್ರೆಜಿಲ್ ರಾಷ್ಟ್ರೀಯ ತಂಡವು ಅಕ್ಟೋಬರ್ 3 ರಂದು ಕೋಲ್ಕತ್ತಾದ ಪ್ರಸಿದ್ಧ ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ಭಾರತವನ್ನು ಎದುರಿಸಲಿದೆ.

ಬ್ರೆಜಿಲಿಯನ್ ಫುಟ್‌ಬಾಲ್ ಒಕ್ಕೂಟ (CBF) ಈ ಪಂದ್ಯವನ್ನು ಅಧಿಕೃತವಾಗಿ ದೃಢಪಡಿಸಿದ್ದು, ಬ್ರೆಜಿಲ್ ತಂಡವು ಭಾರತೀಯ ನೆಲದಲ್ಲಿ ಆಡಲಿರುವುದು ಇದೇ ಮೊದಲ ಬಾರಿಯಾಗಿದೆ. 2026ರ ಫಿಫಾ ವಿಶ್ವಕಪ್ ವೇಳೆಯಲ್ಲಿ ಭಾರತೀಯ ಅಭಿಮಾನಿಗಳು ಬ್ರೆಜಿಲ್‌ಗೆ ನೀಡಿದ ಅಭೂತಪೂರ್ವ ಬೆಂಬಲ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದ ಸಂಭ್ರಮಾಚರಣೆಗಳನ್ನು ಕಂಡು ಬ್ರೆಜಿಲ್ ಈ ನಿರ್ಧಾರಕ್ಕೆ ಬಂದಿದೆ.

ಆಸ್ಟ್ರೇಲಿಯಾ ಪ್ರವಾಸದ ನಂತರ ಭಾರತಕ್ಕೆ ಭೇಟಿ ನೀಡುತ್ತಿರುವುದಾಗಿ ತಿಳಿಸಿರುವ ಸಿಬಿಎಫ್, ತಲೆಮಾರುಗಳಿಂದ ಬ್ರೆಜಿಲ್ ಫುಟ್‌ಬಾಲ್ ಅನ್ನು ಪ್ರೀತಿಸುತ್ತಾ ಬಂದಿರುವ ಲಕ್ಷಾಂತರ ಭಾರತೀಯ ಅಭಿಮಾನಿಗಳ ಮುಂದೆ ಆಡಲು ಮತ್ತು ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲು ಕಾತುರದಿಂದಿರುವುದಾಗಿ ಹೇಳಿದೆ.

- Advertisement -

Latest News

error: Content is protected !!