Saturday, August 29, 2026
Homeಕರಾವಳಿಕಾಸರಗೋಡುಚಾಲಕನ ನಿಯಂತ್ರಣ ತಪ್ಪಿ ಮನೆ ಮೇಲೆ ಬಿದ್ದ ಟಿಪ್ಪರ್: ಚಾಲಕನ ದುರಂತ ಸಾವು

ಚಾಲಕನ ನಿಯಂತ್ರಣ ತಪ್ಪಿ ಮನೆ ಮೇಲೆ ಬಿದ್ದ ಟಿಪ್ಪರ್: ಚಾಲಕನ ದುರಂತ ಸಾವು

- Advertisement -
- Advertisement -

ಕಾಸರಗೋಡು: ಮಡಿಕೈನ ಕಂಜಿರಪೊಯಿಲ್‌ನಲ್ಲಿ ಶನಿವಾರ ಬೆಳಿಗ್ಗೆ ಟಿಪ್ಪರ್ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಮನೆಯೊಂದರ ಮೇಲೆ ಉರುಳಿ ಬಿದ್ದ ಪರಿಣಾಮ, ಚಾಲಕ ದುರಂತವಾಗಿ ಸಾವನ್ನಪ್ಪಿದ್ದಾರೆ.

ಮೃತ ವ್ಯಕ್ತಿಯನ್ನು ಚಾಯ್ಯೋಂ ನಿವಾಸಿ ಸಾದಿಕ್ (40) ಎಂದು ಗುರುತಿಸಲಾಗಿದೆ. ಕುಳಂಗಡ್‌ನಲ್ಲಿ ಕೆಂಪು ಮಣ್ಣನ್ನು ಖಾಲಿ ಮಾಡಿದ ನಂತರ ವಾಹನವನ್ನು ಮುಂದಕ್ಕೆ ಚಲಿಸುತ್ತಿದ್ದಾಗ ಈ ಅಪಘಾತ ಸಂಭವಿಸಿದ್ದು, ಲಾರಿಯು ಪಕ್ಕದಲ್ಲೇ ಇದ್ದ ಪಿ. ಗೋಪಾಲನ್ ಎಂಬುವವರ ಮನೆಯ ಮೇಲೆ ಬಿದ್ದಿದೆ.

ಇದರ ಪರಿಣಾಮವಾಗಿ ಮನೆಯ ಅಡುಗೆ ಕೋಣೆ ಸಂಪೂರ್ಣವಾಗಿ ಧ್ವಂಸಗೊಂಡಿದೆ. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಸಾದಿಕ್ ಅವರನ್ನು ತಕ್ಷಣವೇ ಆಸ್ಪತ್ರೆಗೆ ಸೇರಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ.

- Advertisement -

Latest News

error: Content is protected !!