Saturday, June 6, 2026
Homeತಾಜಾ ಸುದ್ದಿಶೈನ್ ಮದುವೆಯಾಗುತ್ತಿರುವ ಹುಡುಗಿ ಇವರೇನಾ?

ಶೈನ್ ಮದುವೆಯಾಗುತ್ತಿರುವ ಹುಡುಗಿ ಇವರೇನಾ?

- Advertisement -
- Advertisement -

ಬೆಂಗಳೂರು : ಮೊನ್ನೆಯಷ್ಟೇ ಬಿಗ್ ಬಾಸ್ ವಿನ್ನರ್ ಶೈನ್ ಶೆಟ್ಟಿ ಇನ್ಸ್ಟಾಗ್ರಾಮ್ ನಲ್ಲಿ ಹುಡುಗಿಯೊಬ್ಬರ ಕೈ ಹಿಡಿದುಕೊಂಡಿರುವ ವಿಡಿಯೋ ಒಂದನ್ನು ಶೇರ್ ಮಾಡಿಕೊಂಡಿದ್ದರು.. ಅಲ್ಲದೇ ಶೀಘ್ರದಲ್ಲಿ ಸಿಹಿ ಸುದ್ದಿಯೊಂದನ್ನು ಹೇಳೋದಾಗಿ ಶೈನ್ ಹೇಳಿಕೊಂಡಿದ್ದರು. ಬಹುತೇಕರು ಆ ಕೈ ಗಾಯಕಿ ಸಂಗೀತಾ  ರಾಜೀವ್ ಅವರದ್ದು ಅಂತಾ ಗೆಸ್ ಮಾಡಿದ್ದರು.

ಯೆಸ್… ಸ್ವತಃ ಶೈನ್ ಹಾಗೂ ಸಂಗೀತಾ ರಾಜೀವ್ ಅವರೇ ಈ ಬಗ್ಗೆ ಇನ್ನೊಂದು ವಿಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಅದರಲ್ಲಿ ಸಂಗೀತಾ ಅವರು ಶೈನ್ ವಿಡಿಯೋದಲ್ಲಿ ಇದ್ದ ಕೈ ನನ್ನದು ಹಾಗೇ ನಾನು ಮಾಡಿದ್ದ ಪೋಸ್ಟ್ ನಲ್ಲಿದ್ದ ಕೈ ಶೈನ್ ಅವರದ್ದು ಅಂತಾ ಹೇಳಿದ್ದಾರೆ. ನಿನ್ನೆ ಈ ವಿಡಿಯೋ ಪೋಸ್ಟ್ ಮಾಡಿರುವ ಸಂಗೀತಾ ನಾಳೆ (ಇವತ್ತು) ನಿಮಗೆ ಇನ್ನೊಂದು ಸಪ್ರೈಸ್ ಇದೆ ಎಂದು ಹೇಳಿದ್ದಾರೆ.

ಈ ವಿಡಿಯೋ ನೋಡಿದ ಬಹುತೇಕರು ಶೈನ್ ಮದುವೆಯಾಗುತ್ತಿರುವ ಹುಡುಗಿ ಸಂಗೀತಾ ಅಂತಾ ಕಮೆಂಟ್ ಮಾಡಿದ್ದರೆ, ಇನ್ನೂ ಕೆಲವರು ಅವರಿಬ್ಬರು ಜೊತೆಯಾಗಿ ಆಲ್ಬಂ ಸಾಂಗ್ ಮಾಡ್ತಿರ್ಬೇಕು ಅಂತಾ ಕಮೆಂಟ್ ಹಾಕಿದ್ದಾರೆ. ಆದರೆ ನಿಜ ವಿಚಾರ ಏನೂ ಅನ್ನೋದಕ್ಕೆ ಇವತ್ತು ಅವರು ಹಾಕೋ ಪೋಸ್ಟ್ ನಲ್ಲಿ ಉತ್ತರ ಸಿಗಲಿದೆ..

- Advertisement -

Latest News

error: Content is protected !!