Saturday, May 18, 2024
Homeತಾಜಾ ಸುದ್ದಿBIG BREAKING : ಕೇಂದ್ರದ ಮಾಜಿ ಸಚಿವ `ಜಸ್ವಂತ್ ಸಿಂಗ್' ನಿಧನ

BIG BREAKING : ಕೇಂದ್ರದ ಮಾಜಿ ಸಚಿವ `ಜಸ್ವಂತ್ ಸಿಂಗ್’ ನಿಧನ

spot_img
- Advertisement -
- Advertisement -

ನವದೆಹಲಿ : ಅನಾರೋಗ್ಯದಿಂದ ಬಳಲುತ್ತಿದ್ದ ಕೇಂದ್ರದ ಮಾಜಿ ಸಚಿವ ಜಸ್ವಂತ್ ಸಿಂಗ್ (82) ಅವರು ಇಂದು ನಿಧನರಾಗಿದ್ದಾರೆ.ಸಿಂಗ್ ದಾರ್ಜಿಲಿಂಗ್ ಸಂಸದೀಯ ಕ್ಷೇತ್ರದಿಂದ ಸಂಸತ್ ಸದಸ್ಯರಾಗಿದ್ದರು. ಅವರು ಭಾರತದ ರಾಜಸ್ಥಾನ ರಾಜ್ಯದವರಾಗಿದ್ದು 1990ರ ದಶಕದಲ್ಲಿ ಭಾರತೀಯ ಸೇನೆಯಲ್ಲಿ ಅಧಿಕಾರಿಯಾಗಿದ್ದರು ಮತ್ತು ಮೇಯೋ ಕಾಲೇಜ್ ಹಾಗೂ ನ್ಯಾಷನಲ್ ಡಿಫೆನ್ಸ್ ಅಕಾಡೆಮಿ, ಖಡಕ್‌ವಾಸ್ಲಾದ ಹಳೆಯ ವಿದ್ಯಾರ್ಥಿಯಾಗಿದ್ದರು.

ಪ್ರಧಾನಿ ನರೇಂದ್ರ ಮೋದಿ ಈ ಕುರಿತು ಟ್ವೀಟ್ ಮಾಡಿದ್ದು “ಜಸ್ವಂತ್ ಸಿಂಗ್ ಅವರು ದೇಶಕ್ಕಾಗಿ ಮೊದಲು ಸೈನಿಕರಾಗಿ, ನಂತರ ರಾಜಕೀಯ ದೊಂದಿಗೆ ಸುದೀರ್ಘ ಒಡನಾಟ ಹೊಂದಿದ್ದರು. ಅಟಲ್ ಅವರ ಸರ್ಕಾರದ ಅವಧಿಯಲ್ಲಿ ಅವರು ಪ್ರಮುಖ ಖಾತೆಗಳನ್ನು ನಿಭಾಯಿಸಿ, ಹಣಕಾಸು, ರಕ್ಷಣೆ ಮತ್ತು ವಿದೇಶಾಂಗ ವ್ಯವಹಾರಗಳಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು. ಅವರ ಈ ಸಾವನ್ನು ಕೇಳಿ ದುಃಖವಾಯಿತು ಎಂದು ನುಡಿದಿದ್ದಾರೆ.

- Advertisement -
spot_img

Latest News

error: Content is protected !!