Sunday, September 27, 2026
Homeಕರಾವಳಿಉಡುಪಿಬ್ಯಾಂಕ್ KYC ಹೆಸರಲ್ಲಿ ಅಪರಿಚಿತರಿಂದ ಲಿಂಕ್: ಉಡುಪಿಯ ವ್ಯಕ್ತಿಗೆ ₹17.50 ಲಕ್ಷ ವಂಚನೆ

ಬ್ಯಾಂಕ್ KYC ಹೆಸರಲ್ಲಿ ಅಪರಿಚಿತರಿಂದ ಲಿಂಕ್: ಉಡುಪಿಯ ವ್ಯಕ್ತಿಗೆ ₹17.50 ಲಕ್ಷ ವಂಚನೆ

- Advertisement -
- Advertisement -

ಉಡುಪಿ: ಬ್ಯಾಂಕ್ ಅಧಿಕಾರಿ ಎಂದು ನಂಬಿಸಿ, ವಾಟ್ಸಾಪ್ ಮೂಲಕ APK ಫೈಲ್ ಕಳುಹಿಸಿ ಕೆವೈಸಿ (KYC) ನವೀಕರಣದ ನೆಪದಲ್ಲಿ ನಗರದ ವ್ಯಕ್ತಿಯೊಬ್ಬರಿಂದ ₹17.50 ಲಕ್ಷ ಹಣವನ್ನು ಸೈಬರ್ ವಂಚಕರು ದೋಚಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.ಕುಕ್ಕಿಕಟ್ಟೆ ನಿವಾಸಿ ಅಜಯ್ ಜಗದೀಶ್ ವಂಚನೆಗೊಳಗಾದ ದುರ್ದೈವಿ. ಈ ಸಂಬಂಧ ಉಡುಪಿ ಸೆನ್ (CEN) ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ನಡೆದಿದ್ದೇನು?

ಆಗಸ್ಟ್ 27 ರಂದು ಸಂಜೆ 4:15 ರ ಸುಮಾರಿಗೆ ಅಜಯ್ ಅವರ ವಾಟ್ಸಾಪ್‌ಗೆ (+91 9315675768) ಸಂದೇಶವೊಂದು ಬಂದಿತ್ತು. ತಾನು ‘ಸೌತ್ ಇಂಡಿಯನ್ ಬ್ಯಾಂಕ್’ ಪ್ರತಿನಿಧಿ ‘ಶಿವಕುಮಾರ್’ ಎಂದು ಪರಿಚಯಿಸಿಕೊಂಡಿದ್ದ ಸೈಬರ್ ಚೋರ, ಬ್ಯಾಂಕ್ ಖಾತೆಯ ಕೆವೈಸಿ ಅಪ್‌ಡೇಟ್ ಮಾಡಬೇಕೆಂದು ಹೇಳಿ ಒಂದು APK ಫೈಲ್ ಮತ್ತು ಲಿಂಕ್ ಕಳುಹಿಸಿದ್ದ. ಇದನ್ನು ನಿಜವೆಂದು ನಂಬಿದ ಅಜಯ್, ಲಿಂಕ್ ತೆರೆದು ತಮ್ಮ ಬ್ಯಾಂಕ್ ಖಾತೆಯ ಗೌಪ್ಯ ವಿವರಗಳನ್ನು ಭರ್ತಿ ಮಾಡಿದ್ದಾರೆ.

ಬಳಿಕ ದೈನಿಕ ವಹಿವಾಟಿನ ಪರಿಮಿತಿ (Daily Limit) ಹೆಚ್ಚಿಸುವ ನೆಪವೊಡ್ಡಿ ದೂರುದಾರರ ಐಸಿಐಸಿಐ (ICICI) ಬ್ಯಾಂಕ್ ಖಾತೆಯ ವಿವರಗಳನ್ನೂ ವಂಚಕ ಪಡೆದುಕೊಂಡಿದ್ದಾನೆ. ಸೆಪ್ಟೆಂಬರ್ 2 ರಂದು ಹಂತ-ಹಂತವಾಗಿ ಅಜಯ್ ಅವರ ಐಸಿಐಸಿಐ ಬ್ಯಾಂಕ್ ಖಾತೆಯಿಂದ ವಿವಿಧ ಅಪರಿಚಿತ ಖಾತೆಗಳಿಗೆ ಬರೋಬ್ಬರಿ ₹17,50,000 ವರ್ಗಾಯಿಸಿಕೊಂಡು ವಂಚನೆ ಎಸಗಿದ್ದಾನೆ.

ತಾನು ಸೈಬರ್ ದರೋಡೆಗೆ ಒಳಗಾಗಿರುವುದು ತಿಳಿಯುತ್ತಿದ್ದಂತೆಯೇ ಅಜಯ್ ಜಗದೀಶ್ ಉಡುಪಿ ಸೈಬರ್ ಅಪರಾಧ (CEN) ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಪೊಲೀಸರು ಅಪರಾಧ ಕ್ರಮಾಂಕ 36/2026 ರಂತೆ ಮಾಹಿತಿ ತಂತ್ರಜ್ಞಾನ ಕಾಯ್ದೆ (IT Act) ಯ ಕಲಂ 66(D) ಹಾಗೂ ಭಾರತೀಯ ನ್ಯಾಯ ಸಂಹಿತೆ (BNS) ಯ ಕಲಂ 319(2), 318(4) ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

- Advertisement -

Latest News

error: Content is protected !!