Wednesday, August 5, 2026
Homeಕರಾವಳಿಉಡುಪಿಉಡುಪಿ: ಜನರಲ್ ಸ್ಟೋರ್‌ನಲ್ಲಿ ಬೆಂಕಿ ಅನಾಹುತ: 40 ಲಕ್ಷ ರೂ.ಗಿಂತ ಹೆಚ್ಚು ನಷ್ಟ

ಉಡುಪಿ: ಜನರಲ್ ಸ್ಟೋರ್‌ನಲ್ಲಿ ಬೆಂಕಿ ಅನಾಹುತ: 40 ಲಕ್ಷ ರೂ.ಗಿಂತ ಹೆಚ್ಚು ನಷ್ಟ

- Advertisement -
- Advertisement -

ಉಡುಪಿ: ಜನರಲ್ ಸ್ಟೋರ್‌ನಲ್ಲಿ ಬೆಂಕಿ ಅನಾಹುತ ಸಂಭವಿಸಿ 40 ಲಕ್ಷ ರೂ.ಗಿಂತ ಹೆಚ್ಚು ನಷ್ಟವಾಗಿರುವ ಘಟನೆ

ಕುಂದಾಪುರ ತಾಲೂಕಿನ ತೆಕ್ಕಟ್ಟೆ ಸಮೀಪ ರಾಷ್ಟ್ರೀಯ ಹೆದ್ದಾರಿ – 66ರ ಕುವೆಂಪು ಶಾಲೆ ಬಳಿ ಇದ್ದ ಜನರಲ್ ಸ್ಟೋರ್‌ನಲ್ಲಿ ನಡೆದಿದೆ.

ಅಂಗಡಿ ಮಾಲೀಕ ಸಂತೋಷ್ ಎಂದಿನಂತೆ ರಾತ್ರಿ ವ್ಯಾಪಾರ ಮುಗಿಸಿ ಅಂಗಡಿಗೆ ಬೀಗ ಹಾಕಿ ಮನೆಗೆ ತೆರಳಿದ್ದರು. ಮುಂಜಾನೆ 1:30ರ ವೇಳೆಗೆ ಅಂಗಡಿಯೊಳಗೆ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು, ಕ್ಷಣಾರ್ಧದಲ್ಲೇ ಇಡೀ ಅಂಗಡಿಗೆ ಬೆಂಕಿ ಆವರಿಸಿದೆ. ಅಗ್ನಿ ಅವಘಡದಲ್ಲಿ ದಿನಸಿ ಸಾಮಗ್ರಿಗಳು, ಫ್ರಿಡ್ಜ್‌ಗಳು, ಪೀಠೋಪಕರಣಗಳು ಹಾಗೂ ಇತರೆ ವಾಣಿಜ್ಯೋಪಯೋಗಿ ವಸ್ತುಗಳು ಸಂಪೂರ್ಣ ಸುಟ್ಟು ಭಸ್ಮವಾಗಿವೆ. 

 ಅಂಗಡಿಯಲ್ಲಿದ್ದ ಮೂರು ಫ್ರಿಡ್ಜ್ ಗಳ ಪೈಕಿ ಒಂದರಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಸಂಭವಿಸಿ ಬೆಂಕಿ ಹೊತ್ತಿಕೊಂಡಿರಬಹುದೆಂದು ಶಂಕಿಸಲಾಗಿದೆ. ಆದರೆ, ಅಗ್ನಿ ಅವಘಡಕ್ಕೆ ನಿಖರ ಕಾರಣ ತನಿಖೆಯ ಬಳಿಕವೇ ತಿಳಿದುಬರಬೇಕಿದೆ.

- Advertisement -

Latest News

error: Content is protected !!