
ಬೆಳ್ತಂಗಡಿ; ನಮ್ಮ ಹಕ್ಕಿಗಾಗಿ ನಮ್ಮ ಹೆಜ್ಜೆ ಬೃಹತ್ ಪ್ರತಿಭಟನೆ ಚಾರ್ಮಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಮುಖ್ಯ ಪೇಟೆ ಕಕ್ಕಿಂಜೆಯಲ್ಲಿ ನಡೆಯಿತು ವಿಶೇಷ ಕಾಲ್ನಡಿಗೆ ಜಾಥಾ ಮೂಲಕ ಪ್ರತಿಭಟನೆ ನಡೆಯಿತು. ಪ್ರಾಸ್ತಾವಿಕ ಮಾತುಗಳನ್ನಾಡಿದ ಬಿಜೆಪಿ ಬೆಳ್ತಂಗಡಿ ಮಂಡಲ ಅಧ್ಯಕ್ಷರಾದ ಶ್ರೀನಿವಾಸ್ ರಾವ್ ಸರ್ಕಾರದ ಆಡಳಿತ ವಿರೋಧಿ ನೀತಿಗಳ ವಿರುದ್ಧ ಕಿಡಿಕಾರಿದರು.
ಪ್ರತಿಭಟನೆಯಲ್ಲಿ ಶಾಸಕರು ನೆರೆದ ಗ್ರಾಮಸ್ಥರನ್ನು ಉದ್ದೇಶಿಸಿ ಸರ್ಕಾರದ ವಿರುದ್ಧ ಆಡಳಿತ ವಿರೋಧಿ ನೀತಿಗಳ ವಿರುದ್ಧ ಎಳೆ ಎಳೆಯಾಗಿ ವಿವರಿಸಿದರು. ವೇದಿಕೆಯಲ್ಲಿ ಜಿಲ್ಲಾ ಸಹ ಪ್ರಭಾರಿಗಳಾದ ಜಯಂತ್ ಕೋಟ್ಯಾನ್, ರಾಜ್ಯ ಕಾರ್ಯಕಾರಿಣಿ ಸದಸ್ಯೆ ಸುಚರಿತ ಭಟ್, ಉಜಿರೆ ಮಹಾಶಕ್ತಿ ಕೇಂದ್ರದ ಯಶವಂತ್ ಗೌಡ ಪುದುವೆಟ್ಟು, ಮಂಡಲ ಪ್ರಧಾನ ಕಾರ್ಯದರ್ಶಿ ಜಯಾನಂದ್, ಮನ್ ಕೀ ಬಾತ್ ಜಿಲ್ಲಾ ಸಂಚಾಲಕರಾದ ಸೀತಾರಾಮ್ ಬೆಳಾಲ್, ಸಹಕಾರ ಸಂಘದ ಪ್ರಕಾಶ್ ನಾರಾಯಣ ರಾವ್, ಮಂಡಲ ಉಪಾಧ್ಯಕ್ಷರು ಕೊರಗಪ್ಪ ಗೌಡ,ಪ್ರಭಾರಿ ಚನ್ನಕೇಶವ, ಶಕ್ತಿ ಕೇಂದ್ರದ ಹಲವು ಪ್ರಮುಖರು, ಕಾರ್ಯಕರ್ತರು, ನಾಗರಿಕರು ಉಪಸ್ಥಿತರಿದ್ದರು. ದಿವಿನೇಶ್ ಚಾರ್ಮಾಡಿ ಕಾರ್ಯಕ್ರಮ ನಿರ್ವಹಣೆ ಮಾಡಿದರು.


