Saturday, June 6, 2026
HomeUncategorizedಇನ್ನುಮಂದೆ ಈ ತರಹದ ಪಾತ್ರಗಳಲ್ಲಿ ನಟಿಸುವುದಿಲ್ಲ ಎಂದ ನಟಿ ರಾಶಿ

ಇನ್ನುಮಂದೆ ಈ ತರಹದ ಪಾತ್ರಗಳಲ್ಲಿ ನಟಿಸುವುದಿಲ್ಲ ಎಂದ ನಟಿ ರಾಶಿ

- Advertisement -
- Advertisement -

ಹೈದರಾಬಾದ್: ಸ್ನೇಹ ಚಿತ್ರದಲ್ಲಿ ರವಿಚಂದ್ರನ್​ ಜೊತೆ, ರಮೇಶ್ ಅರವಿಂದ್​ ಅವರೊಂದಿಗೆ ನಿನ್ನೆ ಪ್ರೀತಿಸುವೆ, ವಿಷ್ಣುವರ್ಧನ್ ಜೊತೆ ‘ರಾಜ ನರಸಿಂಹ’, ‘ಜಮೀನ್ದಾರ್ರು’ ಹೀಗೆ 90ರ ದಶಕದಲ್ಲಿ ಕನ್ನಡ ಚಿತ್ರರಂಗದಲ್ಲಿ ಬೇಡಿಕೆಯ ನಟಿಯಾಗಿ ಗುರುತಿಸಿಕೊಂಡಿದ್ದ ದಕ್ಷಿಣ ಭಾರತದ ನಟಿ ರಾಶಿ ಇನ್ನುಮಂದೆ ಈ ತರಹದ ಪಾತ್ರಗಳಲ್ಲಿ ನಟಿಸುವುದಿಲ್ಲ ಎಂದು ತಿಳಿಸಿದ್ದಾರೆ.

ದಕ್ಷಿಣ ಭಾರತದ ಹಲವು ಭಾಷೆಗಳಲ್ಲಿ ನಟಿಸಿದ ನಟಿ ರಾಶಿ ಅವರು ಹೆಚ್ಚಾಗಿ ಸಾಂಸಾರಿಕ ಸಿನಿಮಾಗಳನ್ನೇ ಮಾಡಿದವರು. ಆದರೆ ರಾಶಿ ‘ನಿಜಂ’ ಸಿನಿಮಾದಲ್ಲಿ ಗ್ಲಾಮರಸ್ ಪಾತ್ರದಲ್ಲಿ ನಟಿಸಿದ್ದು, ಇದು ಅಭಿಮಾನಿಗಳಿಗೆ ಇಷ್ಟವಾಗಲಿಲ್ಲ ಎನ್ನಲಾಗಿದೆ.

ಲಾಕ್ ಡೌನ್ ವೇಳೆ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದ ನಟಿ ರಾಶಿಗೆ ಅಭಿಮಾನಿಯೊಬ್ಬರು ‘ನಿಜಂ’ ಸಿನಿಮಾದಲ್ಲಿ ಗ್ಲಾಮರಸ್ ಪಾತ್ರ ಮಾಡಬಾರದಿತ್ತು ಎಂದಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ನಟಿ ‘ ಆ ರೀತಿಯ ಪಾತ್ರಗಳನ್ನು ನಿರ್ವಹಿಸುವುದು ನನಗೂ ವೈಯಕ್ತಿಕವಾಗಿ ಇಷ್ಟವಾಗುವುದಿಲ್ಲ. ಆದರೆ ಪರಿಸ್ಥಿತಿ ಅನುಸಾರ ಆ ಪಾತ್ರ ಮಾಡಬೇಕಾಯಿತು ಎಂದು ಹೇಳಿದ್ದಾರೆ.

- Advertisement -

Latest News

error: Content is protected !!