Saturday, June 6, 2026
Homeಮನರಂಜನೆಅಂದು ಮಾವ ಇಂದು ಅಳಿಯ, ಹೇಗಿದೆ ನೋಡಿ ಅನಿರುದ್ಧ್ ಕೊಡಗಿನ ವೀರನ ಗೆಟಪ್...

ಅಂದು ಮಾವ ಇಂದು ಅಳಿಯ, ಹೇಗಿದೆ ನೋಡಿ ಅನಿರುದ್ಧ್ ಕೊಡಗಿನ ವೀರನ ಗೆಟಪ್…

- Advertisement -
- Advertisement -

ಬೆಂಗಳೂರು : ಜೊತೆ ಜೊತೆಯಲಿ ಸೀರಿಯಲ್ ಕಿರುತೆರೆ ಯಾವ ರೀತಿ ಸೆನ್ಸೆಷನ್ ಕ್ರಿಯೇಟ್ ಮಾಡಿದೆ ಅನ್ನೋದು ನಿಮಗೆಲ್ಲಾ ಗೊತ್ತೇ ಇದೆ. ಅದರಲ್ಲೂ ಈಗೀಗ ಸೀರಿಯಲ್ ಸಾಕಷ್ಟು ಕುತೂಹಲ ಮೂಡಿಸುತ್ತಿದೆ. ಧಾರಾವಾಹಿ ಅಂದ್ರೆ ಸಾಕು ಮಾರು ದೂರ ಓಡುತ್ತಿದ್ದವರನ್ನು ಕೂಡ ಟಿವಿ ಮುಂದೆ ಕೂರುವಂತೆ ಮಾಡಿದೆ ಈ ಸೀರಿಯಲ್.

ಸದ್ಯ ಜೊತೆ ಜೊತೆಯಲಿ ಸೀರಿಯಲ್ ನಲ್ಲಿ ಕಳೆದ ಸಂಚಿಕೆಯಲ್ಲಿ ಟ್ರೆಡಿಷನಲ್ ಗೆಟಪ್ ನಲ್ಲಿ ಎಲ್ಲರೂ ಆರ್ಯವರ್ಧನ್ ಆಫೀಸ್ ಗೆ ಬಂದಿರುವ ದೃಶ್ಯವನ್ನು ನೀವೆಲ್ಲಾ ನೋಡಿದ್ದೀರಿ. ಅನು ಹಾಗೂ ಆರ್ಯವರ್ಧನ್ ಕೊಡಗಿನ ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚಿದ್ರು. ಅನು ಹಾಗೂ ಆರ್ಯವರ್ಧನ್ ಅವರನ್ನು ಕೊಡಗಿನ ಉಡುಗೆಯಲ್ಲಿ ನೋಡಿದ ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ. ಇನ್ನು ಸಾಹಸಸಿಂಹ ವಿಷ್ಣುವರ್ಧನ್ ಅವರು ಕೂಡ ಮುತ್ತಿನಹಾರ ಸಿನಿಮಾದಲ್ಲಿ ಇದೇ ರೀತಿ ಕಾಸ್ಟ್ಯೂಮ್ ನಲ್ಲಿ ಮಿಂಚಿದ್ದರು. ಇದೀಗ ಅವರ ಅಳಿಯ ಅನಿರುದ್ಧ್ ಅವರು ಅದೇ ಧಿರಿಸಿನಲ್ಲಿರೋದು ನೋಡಿ ಅಭಿಮಾನಿಗಳು ಸಂತಸ ಪಡುತ್ತಿದ್ದಾರೆ.

- Advertisement -

Latest News

error: Content is protected !!