Saturday, June 13, 2026
Homeತಾಜಾ ಸುದ್ದಿಆ ಅದ್ಭುತ ಫೋಟೋವನ್ನ ಸೆರೆ ಹಿಡಿಯಲು ಫೋಟೋಗ್ರಾಫರ್ ಕಬಿನಿ ಕಾಡಿನಲ್ಲಿ ಕಳೆದ ದಿನವೆಷ್ಟು ಗೊತ್ತಾ?

ಆ ಅದ್ಭುತ ಫೋಟೋವನ್ನ ಸೆರೆ ಹಿಡಿಯಲು ಫೋಟೋಗ್ರಾಫರ್ ಕಬಿನಿ ಕಾಡಿನಲ್ಲಿ ಕಳೆದ ದಿನವೆಷ್ಟು ಗೊತ್ತಾ?

- Advertisement -
- Advertisement -

ಬೆಂಗಳೂರು : ಕಳೆದ ಕೆಲವು ದಿನಗಳಿಂದ ಅದೆಷ್ಟೋ ಜನರವಾಟ್ಸಾಫ್ ಸ್ಟೇಟಸ್ ಗಳಲ್ಲಿ, ಫೇಸ್ ಬುಕ್ ಪೋಸ್ಟ್ ಗಳಲ್ಲಿ, ಇನ್ಸ್ಚಾಗ್ರಾಮ್ ಸ್ಟೋರಿಯಲ್ಲಿ ಕರಿಚಿರತೆ ಹಾಗೂ ಇನ್ನೊಂದು ಚಿರತೆ ಜೊತೆಯಾಗಿ ಭಾರೀ ಪೋಸ್ ಕೊಡುತ್ತಿದೆ. ಎಲ್ಲರೂ ಇವರನ್ನು ಕಣ್ಣಲ್ಲೇ ಮುದ್ದು ಮಾಡುತ್ತಿದ್ದಾರೆ. ಆದ್ರೆ ನಾವು ನೋಡಿ, ಸ್ಟೇಟನ್ ಹಾಕಿ ಖುಷಿ ಪಡೋ ಈ ಅದ್ಭುತ ಫೋಟೋವನ್ನು ತೆಗ್ದವರು ಯಾರು? ಇದನ್ನು ತೆಗೆಯೋಕೆ ಅವರು ತೆಗೆದುಕೊಂಡ ಸಮಯವೆಷ್ಟು ಗೊತ್ತಾ…

ಅಂದ್ಹಾಗೆ ಈ ಅಪರೂಪದ ಚಿತ್ರವನ್ನು ಸರೆಹಿಡಿದ ಕೀರ್ತಿ ಮಿಥುನ್.ಎಚ್​ ಅವರಿಗೆ ಸಲ್ಲುತ್ತದೆ. ಈ ಅದ್ಭುತ ಚಿತ್ರ ತೆಗೆಯುಲು ತಾಳ್ಮೆಯಿಂದ ಬರೋಬ್ಬರಿ 6 ದಿನ ಕಾಡಿನಲ್ಲಿ ಕಾದಿದ್ದರಂತೆ.

ತಮ್ಮ ಅನುಭವವನ್ನು ಫೋಟೋದೊಂದಿಗೆ ಇನ್​ಸ್ಟಾಗ್ರಾಂನಲ್ಲಿ ತಿಳಿಸಿರುವ ಮಿಥುನ್, ಈ ಎರಡು ಪ್ರಾಣಿಗಳು ಕಳೆದ ಕೆಲ ವರ್ಷಗಳಿಂದ ಒಟ್ಟಿಗೆ ಬದುಕುತ್ತಿವೆ ಎಂದಿದ್ದಾರೆ. ಅವುಗಳನ್ನು ಸಾಯಾ ಮತ್ತು ಕ್ಲಿಯೋಪಾತ್ರ ಎಂದು ಕರೆದಿರುವ ಮಿಥುನ್​, ಇಬ್ಬರು ಒಟ್ಟಿಗೆ ಇದ್ದಾಗಲೆಲ್ಲಾ ಅವರು ನೋಡುವ ದೃಷ್ಟಿ ಇದೆ. ಈ ರೀತಿ ಪ್ರಾಣಿಗಳು ಒಟ್ಟಿಗೆ ತಿರುಗಾಡುವಾಗ ಗಂಡು ಪ್ರಾಣಿ ಉಸ್ತುವಾರಿಯನ್ನು ವಹಿಸಿಕೊಂಡು ಹೆಣ್ಣು ಪ್ರಾಣಿಯೊಂದಿಗೆ ತಿರುಗುತ್ತದೆ. ಆದರೆ, ಈ ಜೋಡಿಯ ವಿಚಾರದಲ್ಲಿ ನಡೆದಿದ್ದೇ ಬೇರೆ, ಇಲ್ಲಿ ಕ್ಲಿಯೋ ಉಸ್ತುವಾರಿಯನ್ನು ವಹಿಸಿಕೊಂಡಿದ್ದು, ಕರಿಚಿರತೆ ಅದನ್ನು ಹಿಂಬಾಲಿಸುತ್ತಿದೆ ಎಂದು ಬರೆದುಕೊಂಡಿದ್ದಾರೆ.

ಫೋಟೋವನ್ನು ಇನ್​ಸ್ಟಾಗ್ರಾಂನಲ್ಲಿ ಶೇರ್​ ಮಾಡಿಕೊಂಡಾಗಿನಿಂದ ಈವರೆಗೂ 63 ಸಾವಿರಕ್ಕೂ ಹೆಚ್ಚು ಲೈಕ್ಸ್​ಗಳನ್ನು ಗಿಟ್ಟಿಸಿಕೊಂಡಿದ್ದು, ಫೇಸ್​​ಬುಕ್​ ಹಾಗೂ ಟ್ವಿಟರ್​ನಲ್ಲಿ ಸಿಕ್ಕಾಪಟ್ಟೆ ಶೇರ್​ ಆಗುತ್ತಿದೆ.

- Advertisement -

Latest News

error: Content is protected !!