Monday, May 13, 2024
Homeಪ್ರಮುಖ-ಸುದ್ದಿರಾಜ್ಯದಲ್ಲಿ ಇಂದೂ 5 ಸಾವಿರದ ಗಡಿ ದಾಟಿದ ಕೊರೊನಾ ಕೇಸುಗಳು, ಶತಕ ಮೀರಿದ ಸಾವಿನ ಸಂಖ್ಯೆ,...

ರಾಜ್ಯದಲ್ಲಿ ಇಂದೂ 5 ಸಾವಿರದ ಗಡಿ ದಾಟಿದ ಕೊರೊನಾ ಕೇಸುಗಳು, ಶತಕ ಮೀರಿದ ಸಾವಿನ ಸಂಖ್ಯೆ, ಸಿಲಿಕಾನ್ ಸಿಟಿಯಲ್ಲಿ 2267 ಪ್ರಕರಣಗಳು ಪತ್ತೆ

spot_img
- Advertisement -
- Advertisement -

ಬೆಂಗಳೂರು : ರಾಜ್ಯದಲ್ಲಿ ಇಂದು ಕೂಡ ಕೊರೊನಾ ಪ್ರಕರಣ 5 ಸಾವಿರದ ಗಡಿ ದಾಟಿದೆ. ಇಂದು ಒಂದೇ ದಿನ ಬರೋಬ್ಬರಿ 5007 ಪ್ರಕರಣಗಳು ವರದಿಯಾಗಿವೆ. ಆ ಮೂಲಕ ಇದುವರೆಗಿನ ಒಟ್ಟು ಪ್ರಕರಣಗಳ ಸಂಖ್ಯೆ 85,870 ಕ್ಕೇರಿದೆ. ಇನ್ನು ಇಂದು ಒಂದೇ ದಿನ 110 ಮಂದಿಗೆ ಕೋವಿಡ್ ಗೆ ಬಲಿಯಾಗಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಇದುವರೆಗೂ ಕೊರೊನಾಗೆ 1724 ಮಂದ ಬಲಿಯಾದಂತಾಗಿದೆ.

ಇನ್ನು ಸದ್ಯ ರಾಜ್ಯದಲ್ಲಿ 52,791 ಸಕ್ರೀಯ ಪ್ರಕರಣಗಳಿದ್ದು 31,347 ಮಂದಿ ಇದುವರೆಗೂ ಗುಣಮುಖರಾಗಿದ್ದಾರೆ. ಹಾಗೇ ಇವತ್ತು 2037 ಮಂದಿ ಕೋವಿಡ್ ನಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರೋದು ಒಂದು ಕಡೆ ಆತಂಕಕ್ಕೆ ಕಾರಣವಾಗಿದ್ದರೆ ಮತ್ತೊಂದು ಕಡೆ ಗುಣಮುಖರಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿರೋದು ಕೊಂಚ ಸಮಾಧಾನ ತರಿಸಿದೆ.

- Advertisement -
spot_img

Latest News

error: Content is protected !!