Sunday, April 28, 2024
Homeಕರಾವಳಿಉಡುಪಿದಕ್ಷಿಣಕನ್ನಡದಲ್ಲಿಂದು ವರದಿಯಾದ ಕೋವಿಡ್ ಪ್ರಕರಣಗಳಷ್ಟು? ಕೋರೊನಾಗೆ ಇಂದು ಬಲಿಯಾದವರೆಷ್ಟು? ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ...

ದಕ್ಷಿಣಕನ್ನಡದಲ್ಲಿಂದು ವರದಿಯಾದ ಕೋವಿಡ್ ಪ್ರಕರಣಗಳಷ್ಟು? ಕೋರೊನಾಗೆ ಇಂದು ಬಲಿಯಾದವರೆಷ್ಟು? ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ…

spot_img
- Advertisement -
- Advertisement -

ಮಂಗಳೂರು : ದಕ್ಷಿಣಕನ್ನಡ ಜಿಲ್ಲೆಯಲ್ಲಿ ಇಂದು ಬರೋಬ್ಬರಿ 180 ಪ್ರಕರಣಗಳು ವರದಿಯಾಗಿವೆ . ಆ ಮೂಲಕ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 4389ಕ್ಕೆ ಏರಿಕೆಯಾಗಿದೆ. ಇನ್ನು 6 ಮಂದಿ ಇಂದು ಜಿಲ್ಲೆಯಲ್ಲಿ ಕೋವಿಡ್ ಗೆ ಬಲಿಯಾಗಿದ್ದಾರೆ. ಆ ಮೂಲಕ ಇದುವರೆಗೆ ದಕ್ಷಿಣಕನ್ನಡದಲ್ಲಿ ಕೊರೊನಾ ಒಟ್ಟು 89 ಮಂದಿಯನ್ನು ಬಲಿ ಪಡೆದಿದೆ.

ಸದ್ಯ ಜಿಲ್ಲೆಯಲ್ಲಿ 2527 ಸಕ್ರೀಯ ಪ್ರಕರಣಗಳಿದ್ದು, ಇದುವರೆಗೂ 1771 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇಂದು ಒಂದೇ ದಿನದಲ್ಲಿ 239 ಮಂದಿ ಡಿಸ್ಚಾರ್ಜ್ ಆಗಿದ್ದಾರೆ.

ಇನ್ನು ಉಡುಪಿಯಲ್ಲಿ ಇಂದು 190 ಪ್ರಕರಣಗಳು ವರದಿಯಾಗಿವೆ. ಆ ಮೂಲಕ ಇದುವರೆಗೆ ವರದಿಯಾಗಿರುವ ಪ್ರಕರಣಗಳ ಸಂಖ್ಯೆ 3036 ಕ್ಕೆ ಏರಿಕೆಯಾಗಿದೆ, ಇನ್ನು ಇಂದು 3 ಮಂದಿಯನ್ನು ಕೊರೊನಾ ಜಿಲ್ಲೆಯಲ್ಲಿ ಬಲಿ ಪಡೆದುಕೊಂಡಿದೆ. ಸದ್ಯ 1104 ಸಕ್ರೀಯ ಪ್ರಕರಣಗಳಿದ್ದು, 1918 ಮಂದಿ ಗುಣಮುಖರಾಗಿದ್ದಾರೆ. ಒಂದು ಒಂದೇ ದಿನ 88 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

- Advertisement -
spot_img

Latest News

error: Content is protected !!