Friday, August 28, 2026
Homeತಾಜಾ ಸುದ್ದಿಮಂಡ್ಯ ಜಿಲ್ಲೆಯಲ್ಲಿ ಮತ್ತೊಬ್ಬ ಭಿಕ್ಷುಕಿ ಮನೆಯಲ್ಲಿ ಲಕ್ಷಾಂತರ ರೂ. ಹಣ ಪತ್ತೆ

ಮಂಡ್ಯ ಜಿಲ್ಲೆಯಲ್ಲಿ ಮತ್ತೊಬ್ಬ ಭಿಕ್ಷುಕಿ ಮನೆಯಲ್ಲಿ ಲಕ್ಷಾಂತರ ರೂ. ಹಣ ಪತ್ತೆ

- Advertisement -
- Advertisement -

ಮಂಡ್ಯ: ಮಂಡ್ಯ ಜಿಲ್ಲೆಯಲ್ಲಿ ಮತ್ತೊಬ್ಬ ಭಿಕ್ಷುಕಿ ಮನೆಯಲ್ಲೂ ಲಕ್ಷಾಂತರ ರೂಪಾಯಿ ಹಣ ಪತ್ತೆಯಾಗಿದೆ. ಇಂದು ಶ್ರೀರಂಗಪಟ್ಟಣದ ಸಾವಿತ್ರಮ್ಮ ಎಂಬ ಭಿಕ್ಷುಕಿಯ ಮನೆಯಲ್ಲಿ 3.5 ಲಕ್ಷ ರೂಪಾಯಿ ಹಣ ದೊರೆತಿದೆ.

ಅನಾರೋಗ್ಯದಿಂದ ಬಳಲುತ್ತಿದ್ದ ಸಾವಿತ್ರಮ್ಮ ಅವರ ಮನೆಯನ್ನು ಸ್ವಯಂಸೇವಕರು ಸ್ವಚ್ಛಗೊಳಿಸುತ್ತಿದ್ದ ವೇಳೆ ಚೀಲಗಳಲ್ಲಿ ಭಿಕ್ಷೆ ಬೇಡಿ ಸಂಗ್ರಹಿಸಿದ್ದ ನಾಣ್ಯ ಹಾಗೂ ನೋಟುಗಳು ಪತ್ತೆಯಾಗಿವೆ.

ಸಾವಿತ್ರಮ್ಮ ಹಲವು ವರ್ಷಗಳಿಂದ ತನ್ನ ತಾಯಿಯ ಜೊತೆಗೆ ಭಿಕ್ಷೆ ಬೇಡಿಕೊಂಡು ಜೀವನ ಸಾಗಿಸುತ್ತಿದ್ದ‌ರು‌.ಕೆಲವು ತಿಂಗಳ ಹಿಂದೆ ತಾಯಿ ಮೃತಪಟ್ಟಿದ್ದು, ಸಾವಿತ್ರಮ್ಮ ಅನಾರೋಗ್ಯದಿಂದ ಬಳಲುತ್ತಿದ್ದರು.

ಮೊನ್ನೆಯಷ್ಟೇ ಶ್ರೀರಂಗಪಟ್ಟಣದ ಹೂರ್ ಎಂಬ ಮೃತ ಭಿಕ್ಷುಕಿ ಮನೆಯಲ್ಲಿ 8.40 ಲಕ್ಷ ರೂಪಾಯಿ ಹಣ ಪತ್ತೆಯಾಗಿತ್ತು.

- Advertisement -

Latest News

error: Content is protected !!