- Advertisement -
- Advertisement -
ಉಡುಪಿ: ದಿಢೀರ್ ಅಸ್ವಸ್ಥತೆಯಿಂದ ಗುರುವಾರ ನಿಧನರಾದ ಅಂಬಾಗಿಲಿನ ಪ್ರಣವ್ ಹೆಗ್ಡೆ (41) ಅವರ ಅಂಗಾಂಗಗಳನ್ನು ದಾನ ಮಾಡುವ ಮೂಲಕ ಅವರ ಕುಟುಂಬದವರು ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.
ಮಣಿಪಾಲ್ ಟೆಕ್ನಾಲಜೀಸ್‌ನ ಮಾಜಿ ಉದ್ಯೋಗಿಯಾಗಿದ್ದ ಪ್ರಣವ್ ಅವರ ಎರಡು ಕಿಡ್ನಿ, ಲಿವರ್ ಹಾಗೂ ಕಣ್ಣುಗಳನ್ನು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾನ ಮಾಡಲಾಗಿದ್ದು, ಐವರಿಗೆ ಹೊಸ ಬದುಕು ಸಿಕ್ಕಂತಾಗಿದೆ.
ತಾಯಿ, ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿರುವ ಕುಟುಂಬದವರು, ಅತೀವ ದುಃಖದ ನಡುವೆಯೂ ಕೈಗೊಂಡ ಈ ಮಹತ್ವದ ನಿರ್ಧಾರಕ್ಕೆ ಸಾರ್ವಜನಿಕರು ಹಾಗೂ ವೈದ್ಯಕೀಯ ಕ್ಷೇತ್ರದಿಂದ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.
- Advertisement -


