Wednesday, August 26, 2026
Homeಕರಾವಳಿಧಾರಾಕಾರ ಮಳೆಗೆ ಪುಣ್ಯತ್ತಾರು ಸೇತುವೆ ಜಲಾವೃತ: ಪುತ್ತೂರು-ಸುಬ್ರಹ್ಮಣ್ಯ ಸಂಚಾರ ಬಂದ್

ಧಾರಾಕಾರ ಮಳೆಗೆ ಪುಣ್ಯತ್ತಾರು ಸೇತುವೆ ಜಲಾವೃತ: ಪುತ್ತೂರು-ಸುಬ್ರಹ್ಮಣ್ಯ ಸಂಚಾರ ಬಂದ್

- Advertisement -
- Advertisement -

ಕಾಣಿಯೂರು: ಪ್ರದೇಶದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಪುತ್ತೂರು-ಸುಬ್ರಹ್ಮಣ್ಯ ಸಂಪರ್ಕ ರಸ್ತೆಯ ಕಾಣಿಯೂರು ಸಮೀಪವಿರುವ ಪುಣ್ಯತ್ತಾರು ಸೇತುವೆಯು ಆಗೊಸ್ಟ್ 25ರಂದು ಸಂಪೂರ್ಣವಾಗಿ ಮುಳುಗಡೆಯಾಗಿದೆ.

ಸೇತುವೆಯ ಮೇಲಿಂದ ಹೊಳೆಯ ನೀರು ರಭಸವಾಗಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ಈ ಮಾರ್ಗದ ರಸ್ತೆ ಸಂಚಾರವನ್ನು ಪೂರ್ಣಗೊಳಿಸಿ ಸ್ಥಗಿತಗೊಳಿಸಲಾಗಿದೆ. ಇದರಿಂದಾಗಿ ರಸ್ತೆಯ ಎರಡೂ ಬದಿಗಳಲ್ಲಿ ನೂರಾರು ವಾಹನಗಳು ಸಾಲುಗಟ್ಟಿ ನಿಂತಿದ್ದು, ಪ್ರಯಾಣಿಕರು ಪರದಾಡುವಂತಾಗಿದೆ.

ಅಲ್ಲದೆ, ಮಳೆಯ ನೀರಿನ ಪ್ರಮಾಣ ಹೆಚ್ಚಾಗಿ ಸ್ಥಳೀಯ ಹರಿಭಜನ ಮಂದಿರಕ್ಕೂ ನೀರು ನುಗ್ಗಿದ್ದು, ಮಂದಿರವು ಜಲಾವೃತಗೊಂಡಿದೆ.

- Advertisement -

Latest News

error: Content is protected !!