Wednesday, August 26, 2026
Homeತಾಜಾ ಸುದ್ದಿ4 ಲಕ್ಷದ ಜ್ಯುವೆಲ್ಲರಿ ಜೊತೆ ಎಸ್ಕೇಪ್ ಆದ ನಾಯಿ

4 ಲಕ್ಷದ ಜ್ಯುವೆಲ್ಲರಿ ಜೊತೆ ಎಸ್ಕೇಪ್ ಆದ ನಾಯಿ

- Advertisement -
- Advertisement -

ಮಧ್ಯಪ್ರದೇಶ; ಬೀದಿ ನಾಯಿಯೇ ಕಳ್ಳನಾದ ಈ ವಿಚಿತ್ರ ಘಟನೆ ಮಧ್ಯಪ್ರದೇಶದ ಮಂದಸೌರ್ ಜಿಲ್ಲಾ ಆಸ್ಪತ್ರೆಯಲ್ಲಿ ನಡೆದಿದೆ.

ಆಸ್ಪತ್ರೆಯಲ್ಲಿ ಮಗನಿಗೆ ಚಿಕಿತ್ಸೆ ಕೊಡಿಸ್ತಿದ್ದ ಲತಾ ಬಾಯಿ ಅನ್ನೋ ಮಹಿಳೆ, 4 ಲಕ್ಷ ರೂ. ಮೌಲ್ಯದ ಬಂಗಾರ-ಬೆಳ್ಳಿ ಒಡವೆಗಳಿದ್ದ ಬ್ಯಾಗ್‌ ಕಾಣೆಯಾಗಿದೆ ಅಂತ ಕಂಗಾಲಾಗಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಕೂಡಲೇ ಅಲರ್ಟ್ ಆದ ಪೊಲೀಸರು ಆಸ್ಪತ್ರೆಯ ಸಿಟಿವಿ ದೃಶ್ಯಗಳನ್ನು ಚೆಕ್ ಮಾಡಿದಾಗ ಶಾಕ್ ಕಾಯ್ತಿತ್ತು! ಬೆಳಗಿನ ಜಾವ 4 ಗಂಟೆಗೆ ಸರ್ಜಿಕಲ್ ವಾರ್ಡ್‌ಗೆ ಬಂದ ಬೀದಿ ನಾಯಿಯೊಂದು, ಬ್ಯಾಗ್‌ನ ಕಚ್ಚಿಕೊಂಡು ಆರಾಮಾಗಿ ಹೊರಗೆ ನಡೆದುಕೊಂಡು ಹೋಗಿತ್ತು. ಬ್ಯಾಗ್‌ನಲ್ಲಿ ಒಡವೆ ಜೊತೆಗೆ ಆಹಾರ ಪದಾರ್ಥಗಳೂ ಇದ್ದಿದ್ದರಿಂದ, ಅದರ ವಾಸನೆಗೆ ಆಕರ್ಷಿತವಾದ ನಾಯಿ ಬ್ಯಾಗ್‌ನ ಎಗರಿಸಿತ್ತು! ಮನುಷ್ಯ ಕಳ್ಳನನ್ನು ಹುಡುಕುವ ಬದಲು ಪೊಲೀಸರು ಸಿಟಿವಿ ನೋಡ್ತಾ ನಾಯಿ ಹೋದ ಹಾದಿಯಲ್ಲೇ ಕಾರ್ಯಾಚರಣೆ ನಡೆಸಿ, ಕೊನೆಗೆ ಬ್ಯಾಗ್‌ನ ಪತ್ತೆ ಹಚ್ಚಿ ಮಾಲೀಕರಿಗೆ ಒಪ್ಪಿಸಿದ್ದಾರೆ. ಒಡವೆಗಳಂತೂ ಸುರಕ್ಷಿತವಾಗಿ ಸಿಕ್ಕವು, ಆದ್ರೆ ಆಸ್ಪತ್ರೆ ಒಳಗೆ ನಾಯಿಗಳ ಓಡಾಟ ನೋಡಿ ಜನರು ಮಾತ್ರ ಅಚ್ಚರಿಪಟ್ಟಿದ್ದಾರೆ!

- Advertisement -

Latest News

error: Content is protected !!