ಬೆಂಗಳೂರು: ಕಾರ್ಮಿಕ ಇಲಾಖೆಯು ರಾಜ್ಯದಲ್ಲಿನ ಎಲ್ಲಾ ಕಾರ್ಮಿಕರಿಗಾಗಿ ಹೊಸ ಯೋಜನೆಗಳನ್ನು ಮಾಡುತ್ತಿದ್ದು, ಮುಖ್ಯವಾಗಿ ಪರಿಶಿಷ್ಟ ಜಾತಿ ಮತ್ತು ಪಂಗಡದ ನಿರುದ್ಯೋಗಿ ಯುವಕರಿಗೆ ಆಶಾದೀಪ ಯೋಜನೆಯಡಿಯಲ್ಲಿ ಮಹತ್ತರ ಅನುಕೂಲವನ್ನು ಕಲ್ಪಿಸಲು ಮುಂದಾಗಿದೆ ಎಂದು ರಾಜ್ಯ ಕಾರ್ಮಿಕ ಇಲಾಖೆ ಸಚಿವ ಸಂತೋಷ ಲಾಡ್ ಸ್ಪಷ್ಟಪಡಿಸಿದರು.
ನಿರುದ್ಯೋಗಿ ಯುವಕರಿಗೆ ಸಂಸ್ಥೆಗಳು ಕೆಲಸ ನೀಡಿದಲ್ಲಿ ಅಥವ ಅಪ್ರೆಂಟೈಸರ್ ನೀಡದಲ್ಲಿ ತಿಂಗಳಿಗೆ ಒಬ್ಬ ಅಭ್ಯರ್ಥಿಗೆ ಸುಮಾರು 7ಸಾವಿರ ರೂಪಾಯಿವರೆಗೆ ಮ್ಯಾನೇಜ್ ಮೆಂಟಿಗೆ ರಿಅಂಬ್ರೈಸ್ ಮಾಡಲಾಗುವುದು. ಹಾಗೆಯೇ ಸಂಘಟಿತ ಮತ್ತು ಅಸಂಘಟಿತ ಕಾರ್ಮಿಕರಿಗೆ ಹೊಸ ಕಾರ್ಮಿಕ ಯೋಜನೆಗಳ ಕಾರ್ಮಿಕರಿಗೆ ಅಪಘಾತ ವಿಮೆ, ಆಸ್ಪತ್ರೆ ವೆಚ್ಚಕ್ಕೆ ಸಹಾಯ, ಅಪಘಾತ ಹಾಗೂ ಸಹಜ ಮರಣಕ್ಕೆ ಸಹಾಯ, ಮೃತ ಕಾರ್ಮಿಕ ಕುಟುಂಬಕ್ಕೆ ಸಹಾಯ ಮಾಡಲಾಗುತ್ತಿದೆ. ಸಾರಿಗೆ ಮತ್ತು ಅದಕ್ಕೆ ಸಂಬಂಧಿಸಿದ ಕಾಮಿಕರಿಗೆ ಯೋಜನೆ ಮತ್ತು ಮಂಡಳಿ ಜಾರಿಗೆ ತರಲಾಗಿದೆ. ಸುಮಾರು 25ಲಕ್ಷ ಮಂದಿ ಇದಕ್ಕೆ ಸಂಬತಂಧಿಸಿದ ಕಾರ್ಮಿಕರಿದ್ದಾರೆಂದು ಗುರುತಿಸಲಾಗಿದೆ. ಗಿಗ್ ವರ್ಕರ್ಸ್ಗಾಗಿ ಪ್ರತ್ಯೇಕ ಕಾಯಿದೆ ಜಾರಿಗೆ ತರಲಾಗಿದೆ ಎಂದು ತಿಳಿಸಿದ್ದಾರೆ.


