- Advertisement -
![]()
- Advertisement -
ಪುತ್ತೂರು: ಸಹಪಾಠಿಯಿಂದಲೇ ವಿದ್ಯಾರ್ಥಿನಿ ತಾಯಿಯಾದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಂತ್ರಸ್ತೆಯ ಮನೆಗೆ ವಿಶ್ವಕರ್ಮ ಸಮಾಜದ ಮುಖಂಡ ಕೆ.ಪಿ.ನಂಜುಂಡಿ ಜುಲೈ 23 ರಂದು ಭೇಟಿ ನೀಡಿದ್ದಾರೆ.
ಪುತ್ತೂರಿನಲ್ಲಿರುವ ಯುವತಿಯ ಮನೆಗೆ ನೀಡಿದ ಅವರು ಕುಟುಂಬದವರಿಗೆ ಧೈರ್ಯ ಹೇಳಿದ್ದಾರೆ. ಅಲ್ಲದೇ ಆರೋಪಿ ಕೃಷ್ಣ ಜೆ ರಾವ್ ಮದುವೆಯಾಗುವ ಮೂಲಕ ಯುವತಿ ಹಾಗೂ ಮಗುವಿಗೆ ಬದುಕು ಕಟ್ಟಿಕೊಡಬೇಕು ಹಾಗೂ ಪ್ರಕರಣವನ್ನು ಸುಖಾಂತ್ಯಗೊಳಿಸಬೇಕು ಎಂದು ಮನವಿ ಮಾಡಿದ್ದಾರೆ.
ಇದೇ ವೇಳೆ ಮಾತನಾಡಿದ ಅವರು ಶಾಸಕ ಅಶೋಕ್ ರೈ ಅವರು ನನ್ನ ಸ್ನೇಹಿತ. ಅವರು ಪ್ರಕರಣವನ್ನು ಸುಖಾಂತ್ಯಗೊಳಿಸಲು ಸಾಕಷ್ಟು ಪ್ರಯತ್ನ ಮಾಡಿದ್ದಾರೆ ಎಂದಿದ್ದಾರೆ. ಎರಡು ಕಡೆಯಿಂದಲೂ ತಪ್ಪಾಗಿದೆ. ಆದರೂ ಅದನ್ನು ಸರಿಪಡಿಸಿಕೊಂಡು ಹೋಗ್ಬೇಕು ಎಂದಿದ್ದಾರೆ.
- Advertisement -


