Sunday, June 7, 2026
Homeತಾಜಾ ಸುದ್ದಿಮುಂಬೈ: ಟ್ರಾಫಿಕ್ ಸಿಗ್ನಲ್ ನಲ್ಲಿ ಗಂಡ ಹೆಂಡತಿ ಜಗಳ, ನಡು ರಸ್ತೆಯಲ್ಲೆ ಪತಿಯ ಕಾರ್ ಹತ್ತಿ...

ಮುಂಬೈ: ಟ್ರಾಫಿಕ್ ಸಿಗ್ನಲ್ ನಲ್ಲಿ ಗಂಡ ಹೆಂಡತಿ ಜಗಳ, ನಡು ರಸ್ತೆಯಲ್ಲೆ ಪತಿಯ ಕಾರ್ ಹತ್ತಿ ಕುಳಿತ ಪತ್ನಿ

- Advertisement -
- Advertisement -

ಮುಂಬೈ: ಗಂಡಹೆಂಡಿರ ಜಗಳ ಉಂಡು ಮಲಗುವ ತನಕ ಅಂತಾರೆ. ಆದ್ರೆ ಇಲ್ಲಿ ಗಂಡ ಹೆಂಡಿರ ಜಗಳ ನಡುರಸ್ತೆಯಲ್ಲಿ ಗಂಡನ ಕಾರು ಅಡ್ಡ ಹಾಕಿ ಬೀದಿ ರಂಪಾಟ ಮಾಡಿರುವ ಘಟನೆ ನಗರದಲ್ಲಿರುವ ಪೆಡರ್ ರಸ್ತೆಯಲ್ಲಿ ನಡೆದಿದೆ.

ಲಾಕ್ ಡೌನ್ ಪರಿಣಾಮ ಎಲ್ಲರೂ ಮನೆಯಲ್ಲೇ ಅತಿ ಹೆಚ್ಚಿನ ಸಮಯ ಕಳೆಯುತ್ತಿದ್ದಾರೆ. ಡೊಮೆಸ್ಟಿಕ್ ವಯಲೆನ್ಸ್ ಸಹ ಜಾಸ್ತಿಯಾಗಿದೆ ಎಂದು ಅಧ್ಯಯನ ವರದಿಗಳು ಹೇಳಿವೆ. ಇದಕ್ಕೆ ಪೂರಕವೆಂಬಂತೆ ಈ ಘಟನೆ ನಡೆದಿದ್ದು, ಟ್ರಾಫಿಕ್ ಸಿಗ್ನಲ್ ನಲ್ಲಿ ನಿಂತಿದ್ದ ಕಪ್ಪು ಬಣ್ಣದ ದುಬಾರಿ ರೇಂಜ್ ರೋವರ್ ಕಾರಿಗೆ ಮಹಿಳೆಯೊಬ್ಬಳು ಅಡ್ಡಲಾಗಿ ನಿಂತು ಪ್ರತಿಭಟನೆ ನಡೆಸಿದ್ದಾರೆ.

ಕಾರನ್ನು ಮುಂದೆ ಹೋಗದಂತೆ ತಡೆಯಲು ಯತ್ನಿಸುತ್ತಿರುವ ಮತ್ತು ಡ್ರೈವರ್ ಸೀಟಿನ ಪಕ್ಕದ ವಿಂಡೋ ಗ್ಲಾಸನ್ನು ತೆರೆಯಲು ಪ್ರಯತ್ನಿಸುತ್ತಿರುವ ಮತ್ತು ಫೈನಲೀ ಕಾರಿನ ಬಾನೆಟ್ ಮೇಲೇರಿ ರಂಪಾಟ ನಡೆಸುತ್ತಿರುವ ವಿಡಿಯೋ ಫುಲ್ ವೈರಲ್ ಆಗಿದೆ.

- Advertisement -

Latest News

error: Content is protected !!