Wednesday, June 3, 2026
Homeತಾಜಾ ಸುದ್ದಿಬಾಲ್ಯದ ಗೆಳತಿಯನ್ನು 80 ವಯಸ್ಸಿನಲ್ಲಿ ಮದುವೆಯಾದ ಅಜ್ಜ

ಬಾಲ್ಯದ ಗೆಳತಿಯನ್ನು 80 ವಯಸ್ಸಿನಲ್ಲಿ ಮದುವೆಯಾದ ಅಜ್ಜ

- Advertisement -
- Advertisement -

ಪಂಜಾಬ್ : ಬಾಲ್ಯದಲ್ಲಿ ತಾನು ಪ್ರೀತಿಸುತ್ತಿದ್ದಾಕೆಯನ್ನು 80ರ ವಯಸ್ಸಿನಲ್ಲಿ  ಮದುವೆಯಾದ ಅಚ್ಚರಿಯ ಘಟನೆ ಪಂಜಾಬ್ ಪ್ರಾಂತ್ಯದ ಕಸೂರ್ ಪಟ್ಟಣದಲ್ಲಿ ನಡೆದಿದೆ.

ಅಂದ್ಹಾಗೆ 80 ವರ್ಷದ ಅಥರ್ ಖಾನ್ 75 ವರ್ಷದ ನಜೀರನ್ ಬೀಬಿ ಯನ್ನು ತನ್ನ ಬಾಲ್ಯದಲ್ಲಿ ಪ್ರೀತಿಸುತ್ತಿದ್ದ. ಆದರೆ ಇಬ್ಬರಿಗೂ ಮದುವೆಯಾಗೋದಕ್ಕೆ ಸಾಧ್ಯವಾಗಿರಲಿಲ್ಲ.  ಆದ್ರೆ 80 ಹರೆಯದಲ್ಲಿ ಅಥರ್ ಖಾನ್ ಗೆ ಆ ಯೋಗ ಕೂಡಿ ಬಂದಿದೆ.

ಹೌದು…ಮನೆಯವರ ಒತ್ತಾಯಕ್ಕೆ ಅಥರ್ ಖಾನ್ ಬೇರೆ  ಮದುವೆಯಾಗಿದ್ದ. ಆತನಿಗೆ ನಾಲ್ಕು ಮಕ್ಕಳು. ನಾಲ್ಕು ವರ್ಷಗಳ ಹಿಂದೆ ಮೊದಲ ಪತ್ನಿ ಸಾವನ್ನಪ್ಪಿದ್ದಾಳೆ. ನಂತ್ರ ಅಥರ್ ಖಾನ್ ಒಂಟಿಯಾದ. ನಜೀರನ್ ಸ್ಥಿತಿ ಕೂಡ ಇದೇ ಆಗಿತ್ತು. 9 ವರ್ಷಗಳ ಹಿಂದೆ ಪತಿಯನ್ನು ಕಳೆದುಕೊಂಡಿರುವ ನಜೀರನ್ ಗೆ 6 ಮಕ್ಕಳು. ಎಲ್ಲ ಮಕ್ಕಳಿಗೂ ಮದುವೆಯಾಗಿದೆ.

ಮಕ್ಕಳೆಲ್ಲ ದೂರವಾದ್ಮೇಲೆ ಒಂಟಿಯಾಗಿದ್ದವರು ಮತ್ತೆ ಒಂದಾಗಿದ್ದಾರೆ. ಕೆಲ ಸಂಬಂಧಿಕರು ಹಾಗೂ ಸ್ನೇಹಿತರು ಇವ್ರ ಮದುವೆಗೆ ಸಾಕ್ಷಿಯಾದ್ರು.

- Advertisement -

Latest News

error: Content is protected !!