Friday, May 3, 2024
HomeUncategorizedBPL ಕಾರ್ಡ್ ನಿಯಮಗಳಲ್ಲಿ ಯಾವುದೇ ಬದಲಾವಣೆ ಇಲ್ಲ: ಕೊನೆಗೂ ತಮ್ಮ ಹೇಳಿಕೆಯನ್ನು ಸರಿಪಡಿಸಿಕೊಂಡ ಸಚಿವರು

BPL ಕಾರ್ಡ್ ನಿಯಮಗಳಲ್ಲಿ ಯಾವುದೇ ಬದಲಾವಣೆ ಇಲ್ಲ: ಕೊನೆಗೂ ತಮ್ಮ ಹೇಳಿಕೆಯನ್ನು ಸರಿಪಡಿಸಿಕೊಂಡ ಸಚಿವರು

spot_img
- Advertisement -
- Advertisement -

ಬೆಂಗಳೂರು: ಟಿವಿ, ಫ್ರಿಡ್ಜ್​, ವಾಹನಗಳನ್ನು ಹೊಂದಿರುವವರಿಗೆ ಬಿ.ಪಿ.ಎಲ್ ಕಾರ್ಡ್​ ಸ್ಥಗಿತಗೊಳಿಸಿವುದಾಗಿ ಹೇಳಿದ್ದ ಆಹಾರ ಹಾಗೂ ನಾಗರಿಕ ಸಚಿವ ಉಮೇಶ್ ಕತ್ತಿ ಇದೀಗ ತಮ್ಮ ಹೇಳಿಕೆಯನ್ನು ಹಿಂಪಡೆದುಕೊಂಡಿದ್ದಾರೆ.

 BPL ಕಾರ್ಡ್‌ನಿಯಮದಲ್ಲಿ ಯಾವುದೇ ಬದಲಾವಣೆ ಇಲ್ಲ ಅಂತ ಸಚಿವ ಉಮೇಶ್‌ ಕತ್ತಿ ಮಾಧ್ಯಮ ಪ್ರಕಟಣೆ ಹೊರಡಿಸಿದ್ದಾರೆ. ಇದೇ ವೇಳೆ ಅವರು ಈ ಹಿಂದೆ ಇದ್ದ ಮಾರ್ಗಸೂಚಿಗಳನ್ನೇ ಮುಂದುವರಿಸಲಾಗುವುದು, ನಾನು ಅಧಿಕಾರಕ್ಕೆ ಬಂದ ಮೇಲೆ ಯಾವುದೇ ಹೊಸ ನಿಯಮಗಳನ್ನು ನಾನು ಜಾರಿಗೆ ತಂದಿಲ್ಲ ಅಂತ ಹೇಳಿದ್ದಾರೆ.


ಸಚಿವರ ಈ ವರ್ತನೆ ವಿರುದ್ದ ರಾಜಕೀಯ ನಾಯಕರುಗಳು ಸೇರಿದಂತೆ ಅನೇಕ ಮಂದಿ ವಿರೋಧ ವ್ಯಕ್ತಪಡಿಸಿದ್ದರು. 5 ಎಕರೆಗಿಂತ ಹೆಚ್ಚಿನ ಜಮೀನು ಹೊಂದಿರುವವರು, ಮನೆಯಲ್ಲಿ ಟಿವಿ, ಬೈಕ್ ಹಾಗೂ ಫ್ರಿಡ್ಜ್ ಹೊಂದಿರುವವರು BPL ಕಾರ್ಡ್​ ಹೊಂದಿದ್ರೆ ಕೂಡಲೇ ಅದನ್ನು ವಾಪಸ್ಸು ನೀಡುವಂತೆ ಹೇಳಿದ್ದರು. ಇದಲ್ಲದೇ ಕೆಲವು ಸರ್ಕಾರಿ ಅಧಿಕಾರಿಗಳು ಕೂಡ ಬಿಪಿಎಲ್‌ ಕಾರ್ಡ್‌ ಅನ್ನು ಹೊಂದಿದ್ದು ಅವರು ಕೂಡ ಕಾರ್ಡ್ ಅನ್ನು ವಾಪಸ್ಸು ನೀಡುವಂತೆ ಆದೇಶ ಮಾಡಿದ್ದರು.

ಈ ನಡುವೆ ಈ ಬಗ್ಗೆ ಶಾಸಕ ಸೋಮಶೇಖರ ರೆಡ್ಡಿ ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿ ಫ್ರಿಡ್ಜ್‌ ಹಾಗೂ ವಾಹನಗಳು ಇದ್ದೇ ಇರುತ್ತವೆ, ಸರ್ಕಾರ ಯೋಜನೆಗಳನ್ನು ತಲುಪಿಸುವ ನಿಟ್ಟಿನಲ್ಲಿ ಟಿವಿ ಸಹಕಾರಿಯಾಗಲಿದೆ ಅವೇ ಇರಬಾರದು ಅಂದ್ರೆ ಹೇಗೆ ಹೇಳಿ ಅಂತ ಪ್ರಶ್ನೆ ಮಾಡಿದರು. ಇನ್ನೂ ಇದೇ ವೇಳೆ ಅವರು ಇಂತಹ ನಿಯಮಗಳನ್ನು ಮಾಡಿದರೆ ತಪ್ಪಾಗುತ್ತದೆ, ಹೀಗಾಗಿ ನಿಜವಾದ ಬಡವರನ್ನು ಆರ್ಥಿಕ ಮಟ್ಟದಿಂದ ಗುರುತಿಸಿ, ತಪ್ಪಾಗಿ ಕಾರ್ಡ್‌ ಪಡೆದುಕೊಂಡಿರುವವರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಬೇಕು ಅಂತ ಹೇಳಿದರು.


- Advertisement -
spot_img

Latest News

error: Content is protected !!