Saturday, April 20, 2024
Homeಕ್ರೀಡೆಭಾರತ-ಇಂಗ್ಲೆಂಡ್ ದ್ವಿತೀಯ ಟೆಸ್ಟ್- 3ನೇ ದಿನ: ಶತಕ ಬಾರಿಸಿದ ಬೌಲರ್ ಅಶ್ವಿನ್, ದಿನದಾಟ ಅಂತ್ಯಕ್ಕೆ ಇಂಗ್ಲೆಂಡ್‌...

ಭಾರತ-ಇಂಗ್ಲೆಂಡ್ ದ್ವಿತೀಯ ಟೆಸ್ಟ್- 3ನೇ ದಿನ: ಶತಕ ಬಾರಿಸಿದ ಬೌಲರ್ ಅಶ್ವಿನ್, ದಿನದಾಟ ಅಂತ್ಯಕ್ಕೆ ಇಂಗ್ಲೆಂಡ್‌ 53-3

spot_img
- Advertisement -
- Advertisement -

ಚೆನ್ನೈ: ಇಲ್ಲಿನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದ ಮೂರನೇ ದಿನದಾಟದ ಕೊನೆಯ ಅವಧಿಯಲ್ಲಿ ಎರಡನೇ ಇನ್ನಿಂಗ್ಸ್ ಆರಂಭಿಸಿರುವ ಇಂಗ್ಲೆಂಡ್ 3 ವಿಕೆಟ್ ಕಳೆದುಕೊಂಡು 53 ರನ್ ಗಳಿಸಿದೆ.

ಭಾರತ ನೀಡಿರುವ 482 ರನ್‌ ಗುರಿ ಬೆನ್ನತ್ತಿರುವ ಇಂಗ್ಲೆಂಡ್‌ಗೆ ಆರಂಭದಲ್ಲೇ ಅಕ್ಷರ್ ಪಟೇಲ್ ಹಾಗೂ ಆರ್.ಅಶ್ವಿನ್ ಆಘಾತ ನೀಡಿದ್ದಾರೆ. ಪರಿಣಾಮವಾಗಿ ಇಂಗ್ಲೆಂಡ್ ತಂಡವು ಉಳಿದ ಎರಡು ದಿನಗಳಲ್ಲಿ, ಬಾಕಿ ಇರುವ 7 ವಿಕೆಟ್‌ಗಳೊಂದಿಗೆ 429 ರನ್ ಗಳಿಸಬೇಕಿದೆ.

ಇಂಗ್ಲೆಂಡ್ ತಂಡವನ್ನು 134 ರನ್ ಗಳಿಗೆ ಆಲೌಟ್ ಮಾಡಿ 195 ರನ್ ಗಳ ಮುನ್ನಡೆಯೊಂದಿಗೆ ಭಾರತ 2ನೇ ಇನ್ನಿಂಗ್ಸ್ ಬ್ಯಾಟಿಂಗ್ ಆರಂಭಿಸಿತ್ತು. ನಿನ್ನೆ 2ನೇ ದಿನದಾಟದ ಅಂತ್ಯಕ್ಕೆ 1 ವಿಕೆಟ್ ನಷ್ಟಕ್ಕೆ 54 ರನ್ ಗಳಿಸಿದ್ದ ಭಾರತ ಇಂದು 286 ರನ್ ಗಳಿಗೆ ಆಲೌಟ್ ಆಯಿತು. ಭಾರತ ತಂಡಕ್ಕೆ ನಾಯಕ ವಿರಾಟ್ ಕೊಹ್ಲಿ ಹಾಗೂ ಆರ್ ಅಶ್ವಿನ್ ಆಸರೆಯಾದರು. ವಿರಾಟ್ ಕೊಹ್ಲಿ 149 ಎಸೆತಗಳಲ್ಲಿ ಕೊಹ್ಲಿ 7 ಬೌಂಡರಿ ಸಹಿತ 62ರನ್ ಗಳಿಸಿದರು. ರವಿಚಂದ್ರನ್ ಅಶ್ವಿನ್ ಶತಕ(106) ಸಿಡಿಸಿ ಔಟಾದರು. ಇನ್ನು ರೋಹಿತ್ ಶರ್ಮಾ 26, ಮೊಹಮ್ಮದ್ ಸಿರಾಜ್ 16 ರನ್ ಬಾರಿಸಿದ್ದಾರೆ.

ಇಂಗ್ಲೆಂಡ್ ಪರ ಬೌಲಿಂಗ್ ನಲ್ಲಿ ಜಾಕ್ ಲೀಚ್ ಮತ್ತು ಮೊಯಿನ್ ಅಲಿ ತಲಾ 4 ವಿಕೆಟ್ ಪಡೆದಿದ್ದಾರೆ. ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಇಂಗ್ಲೆಂಡ್ 1-0 ಅಂತರದಿಂದ ಮುನ್ನಡೆ ಗಳಿಸಿದೆ. ಇನ್ನು ಈ ಪಂದ್ಯ ಭಾರತಕ್ಕೆ ಅತೀ ಮುಖ್ಯವಾಗಿದೆ.

ಭಾರತ: 329 ಮತ್ತು 286 (ಆರ್.ಅಶ್ವಿನ್ 106, ವಿರಾಟ್ ಕೊಹ್ಲಿ 62, ರೋಹಿತ್ ಶರ್ಮ 26, ಜಾಕ್ ಲೀಚ್ 100ಕ್ಕೆ 4, ಮೊಯಿನ್ ಅಲಿ 98ಕ್ಕೆ 4, ಒಲಿ ಸ್ಟೋಕ್ 21ಕ್ಕೆ 1).

ಇಂಗ್ಲೆಂಡ್: 134 ಮತ್ತು 3 ವಿಕೆಟ್‌ಗೆ 53 (ರೋರಿ ಬರ್ನ್ಸ್ 25, ಡೇನಿಯಲ್ ಲಾರೆನ್ಸ್ 19*, ಅಕ್ಷರ್ ಪಟೇಲ್ 15ಕ್ಕೆ 1, ಆರ್.ಅಶ್ವಿನ್ 28ಕ್ಕೆ 1).

- Advertisement -
spot_img

Latest News

error: Content is protected !!