Thursday, June 4, 2026
Homeಕರಾವಳಿಜುಲೈ 23 ಕ್ಕೆ ವಿವಾಹ ನಿಶ್ಚಯವಾಗಿದ್ದ ಯುವಕ ಮಂಗಳೂರಿನಲ್ಲಿ ಹಿಟ್ ಆ್ಯಂಡ್ ರನ್ ಗೆ ಬಲಿ

ಜುಲೈ 23 ಕ್ಕೆ ವಿವಾಹ ನಿಶ್ಚಯವಾಗಿದ್ದ ಯುವಕ ಮಂಗಳೂರಿನಲ್ಲಿ ಹಿಟ್ ಆ್ಯಂಡ್ ರನ್ ಗೆ ಬಲಿ

- Advertisement -
- Advertisement -

ಮಂಗಳೂರು : ನೇತ್ರಾವತಿ  ಸೇತುವೆಯಲ್ಲಿ ಹಿಟ್ ಆ್ಯಂಡ್ ರನ್ ಅಪಘಾತಕ್ಕೆ 28 ವರ್ಷ ವರ್ಷದ ಯುವಕನೊಬ್ಬ ಬಲಿಯಾಗಿದ್ದಾನೆ. ಇನ್ನು ಮೃತ ವ್ಯಕ್ತಿಯನ್ನು  ಉಬೈದ್ ಎಂದು ಗುರುತಿಸಲಾಗಿದೆ. ಈತ ಉಳ್ಳಾಲ ನಿವಾಸಿಯಾಗಿದ್ದು, ಈತನ ಜೊತೆ ಬೈಕ್ ನಲ್ಲಿ ಹಿಂಬದಿ ಕುಳಿತಿದ್ದ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದಾರೆ. ವೇಗವಾಗಿ ಬಂದ ಕಾರು ಸ್ಕೂಟರ್ ಗೆ ಡಿಕ್ಕಿ ಹೊಡೆದ ರಭಸಕ್ಕೆ, ಸ್ಕೂಟರ್ ಸಿಮೆಂಟ್ ಸಾಗಿಸುತ್ತಿದ್ದ ಟ್ರಕ್ ಗೆ ನುಗ್ಗಿದೆ. ಪರಿಣಾಮ ಉಬೈದ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಇನ್ನು ಇವರ ಬೈಕ್ ಗೆ ಗುದ್ದಿದ ಕಾರನ್ನು  ಸೋಮೇಶ್ವರ ಮುನ್ಸಿಪಲ್ ಆಫೀಸ್  ಮ್ಯಾನೇಜರ್ ಕೃಷ್ಣ ಎಂಬವರು ಚಲಾಯಿಸುತ್ತಿದ್ದರು. ಎರಡು ದಿನಗಳ ಹಿಂದಷ್ಟೇ ಅವರು ಹೊಸ ಕಾರನ್ನು ಖರೀದಿಸಿದ್ದರು. ಇನ್ನು ಘಟನೆ ನಡೆಯುತ್ತಿದ್ದಂತೆ ಚಾಲಕ ಸ್ಥಳದಿಂದ ಎಸ್ಕೇಪ್ ಆಗೋದಕ್ಕೆ ಯತ್ನಿಸಿದ್ದಾರೆ.  ಆದರೆ ಕೂಡಲೇ ತೊಕ್ಕೊಟ್ಟು ಪೊಲೀಸರು ಅವರನ್ನು ಬಂಧಿಸಿದ್ದಾರೆ. ಘಟನೆ ವೇಳೆ ಕಾರಿನಲ್ಲಿ  ಇನ್ನೂ ಇಬ್ಬರು ಪ್ರಯಾಣಿಸುತ್ತಿದ್ದರು ಎಂಬ ಮಾಹಿತಿ ಕೂಡ ಲಭ್ಯವಾಗಿದೆ.

 ಮೃತ ಉಬೇದ್ ಗೆ ನಿಶ್ಚತಾರ್ಥವಾಗಿ, ಇದೇ ಜುಲೈ 23 ರಂದು ವಿವಾಹ ಕೂಡ ನಿಶ್ಚಯವಾಗಿತ್ತು. ಘಟನೆ ಸಂಬಂಧ ದಕ್ಷಿಣ ಸಂಚಾರಿ ಠಾಣೆಯಲ್ಲಿ ಕೇಸು ದಾಖಲಾಗಿದೆ.

- Advertisement -

Latest News

error: Content is protected !!