ಬೆಂಗಳೂರು : ಸಾಮಾಜಿಕ ಜಾಲತಾಣದಲ್ಲಿ ಅತ್ಯಂತ ಆಕ್ವೀಟ್ ಆಗಿರುವ ಸೆಲೆಬ್ರೆಟಿ ಯಾರು ಅಂದ್ರೆ ಮೊದಲಿಗೆ ಬರುವ ಹೆಸರುಗಳಲ್ಲಿ ಒಂದು ನಟ ಜಗ್ಗೇಶ್ ಅವರದ್ದು. ಏನೇ ಇರಲಿ ಅದನ್ನು ಫೇಸ್ ಬುಕ್ ಮೂಲಕ ನಟ ಜಗ್ಗೇಶ್ ಅವರು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಾರೆ. ಆದರೆ ನಿನ್ನೆ ಜಗ್ಗೇಶ್ ಅವರು ಅತ್ಯಂತ ಬೇಸರದಿಂದ ಪೋಸ್ಟ್ ಒಂದನ್ನು ಹಾಕಿದ್ದಾರೆ.
ಕಣ್ಣು ಕಿತ್ತರು ನಿದ್ರೆ ಬರಲಿಲ್ಲಾ ಇವನ ವಿಷಯ ಕೇಳಿ..! ಇವನ ಬಗ್ಗೆ ಬರೆದದ್ದು ಪ್ರಯೋಜನವಿಲ್ಲಾ ಎಂದು ತೆಗೆದುಬಿಟ್ಟೆ..!!
ಕಷ್ಟ ಅಂತ ಬಂದವರಿಗೆ ಭುಜಕೊಡುತ್ತಿದ್ದೆ ಇನ್ನು ಮುಂದೆ ನನ್ನ ಬಳಿ ಯಾರು ಅನಾಮಿಕರು ಬಂದರು ನಂಬುವುದಿಲ್ಲಾ..!!ನನ್ನ ಬದಲಾವಣೆ ಮಾಡಿದ ನಿನಗೆ ಧನ್ಯವಾದ..!! ತುತ್ತು ಸಿಕ್ಕರು ಪ್ರಾಮಾಣಿಕವಾಗಿ ದುಡಿದು ಗಳಿಸಬೇಕು..!! 57ನೇ ವಯಸ್ಸಿಗೆ ಹೊಸ ಪಾಠ ಕಲಿತೆ…. ಕಲಿಯುಗ ಅಂತಾ ಪೋಸ್ಟ್ ಮಾಡಿದ್ದಾರೆ.
ಅಂದ್ಹಾಗೆ, ನಟ ಜಗ್ಗೇಶ್ ಅವರು ಹೀಗೆ ಬೇಸರದಿಂದ ಪೋಸ್ಟ್ ಮಾಡಿದ್ದು ಬೇರಾರ ಬಗ್ಗೆಯೂ ಅಲ್ಲ ಡ್ರೋನ್ ಪ್ರತಾಪ್ ಬಗ್ಗೆ. ಡ್ರೋನ್ ಪ್ರತಾಪ್ ಇಷ್ಟು ದಿನ ಹೇಳಿದ್ದೆಲ್ಲಾ ಸುಳ್ಳು ಅಂತಾ ಗೊತ್ತಾಗುತ್ತಲೇ ಜಗ್ಗೇಶ್ ಈ ರೀತಿ ಪೋಸ್ಟ್ ಮಾಡಿದ್ದಾರೆ. ಈ ಹಿಂದೆ ಪ್ರತಾಪ್ ಸಾಧನೆ ಮಾಡಿದ್ದಾರೆಂದು ಗೊತ್ತಾಗುತ್ತಿದ್ದಂತೆ ಜಗ್ಗೇಶ್ ಅವರನ್ನು ಭೇಟಿಯಾಗಿದ್ದರು ಹಾಗೇ ಅಭಿನಂದಿಸಿದ್ದರು. ಫೇಸ್ ಬುಕ್ ನಲ್ಲಿ ಪೋಸ್ಟ್ ಕೂಡ ಹಾಕಿದ್ದರು.ಆದ್ರೀಗ ಪ್ರತಾಪ್ ಕಾಗೆ ಹಾರಿಸಿದ್ದು ಅಂತಾ ಗೊತ್ತಾಗುತ್ತಿದ್ದಂತೆ ಜಗ್ಗೇಶ್ ಬೇಸರದಿಂದ ಈ ರೀತಿ ಆತನ ಜೊತೆಗಿರುವ ಫೋಟೋ ಒಂದನ್ನು ಪೋಸ್ಟ್ ಮಾಡಿ, ಈ ರೀತಿ ಬರೆದುಕೊಂಡಿದ್ದಾರೆ.


