Saturday, June 6, 2026
Homeಉದ್ಯಮಭಾನುವಾರ ಲಾಕ್‍ಡೌನ್‍: ನಾಳೆ ರಾಜ್ಯದಲ್ಲಿ ಏನಿರುತ್ತೆ ಏನಿರಲ್ಲ..?

ಭಾನುವಾರ ಲಾಕ್‍ಡೌನ್‍: ನಾಳೆ ರಾಜ್ಯದಲ್ಲಿ ಏನಿರುತ್ತೆ ಏನಿರಲ್ಲ..?

- Advertisement -
- Advertisement -

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು ಇದನ್ನು ತಡೆಯುವ ಉದ್ದೇಶದಿಂದ ಪ್ರತಿದಿನ ರಾತ್ರಿ ಕರ್ಫ್ಯೂ ಜಾರಿಗೊಳಿಸಲಾಗಿದೆ. ಅಲ್ಲದೆ ಪ್ರತಿ ಭಾನುವಾರ ಲಾಕ್ಡೌನ್ ಜಾರಿ ಮಾಡಲಾಗಿದೆ. ಇಂದು ರಾತ್ರಿ 8 ಗಂಟೆಯಿಂದ ಸೋಮವಾರ ಬೆಳಿಗ್ಗೆ 5 ಗಂಟೆಯವರೆಗೆ ರಾಜ್ಯದಲ್ಲಿ ಸಂಪೂರ್ಣ ಲಾಕ್ಡೌನ್ ಜಾರಿಯಲ್ಲಿರುತ್ತದೆ.

ಏನು ಇರಲಿದೆ?
ಹಣ್ಣು, ತರಕಾರಿ, ದಿನಸಿ ಪದಾರ್ಥ, ಮಾಂಸ ಮಾರಾಟಕ್ಕೆ ಅವಕಾಶವಿದೆ. ಆಸ್ಪತ್ರೆ, ಮೆಡಿಕಲ್ ಸ್ಟೋರ್‍ಗಳು ತೆರೆದಿರುತ್ತವೆ. ಹೊಟೇಲ್‍ಗಳಿಗೆ ಪಾರ್ಸಲ್‍ಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.

ಯಾವುದಕ್ಕೆ ನಿರ್ಬಂಧ?
ಇನ್ನುಳಿದಂತೆ ಎಲ್ಲ ಪಾರ್ಕ್‍ಗಳನ್ನೂ ಬಂದ್ ಮಾಡಲಾಗುವುದು. ಆಟೋ, ಕ್ಯಾಬ್, ಬೈಕ್ ರಸ್ತೆಗಿಳಿಯುವಂತಿಲ್ಲ. ಬಾರ್, ಸಲೂನ್, ಬ್ಯೂಟಿಪಾರ್ಲರ್ ಯಾವುದೂ ತೆರೆಯುವಂತಿಲ್ಲ. ಮದ್ಯದಂಗಡಿಗಳು ಸಂಪೂರ್ಣ ಬಂದ್ ಆಗಲಿವೆ. ಕೆಎಸ್‍ಆರ್‍ಟಿಸಿ, ಬಿಎಂಟಿಸಿ ಬಸ್‍ಗಳ ಓಡಾಟವಿಲ್ಲ. ಗಾರ್ಮೆಂಟ್ಸ್, ಕಾರ್ಖಾನೆ ಕಂಪೆನಿಗಳು ಬಂದ್ ಆಗಲಿವೆ. ಬೆಂಗಳೂರಿನಲ್ಲಿ ಎಲ್ಲ ಫ್ಲೈ ಓವರ್‍ಗಳು ಇಂದು ಸಂಜೆಯಿಂದಲೇ ಬಂದ್ ಆಗಲಿವೆ.

- Advertisement -

Latest News

error: Content is protected !!