Saturday, June 6, 2026
Homeಕರಾವಳಿಕೊರೊನಾ ನಿಯಂತ್ರಣದ ಬಗ್ಗೆ ಶಾಸಕರಿಂದ ತಾಲೂಕಿನ‌ ಪಂಚಾಯತ್ ಪ್ರತಿನಿಧಿಗಳ ಸಭೆ : ಸ್ವಯಂ ಘೋಷಿತ ಬಂದ್...

ಕೊರೊನಾ ನಿಯಂತ್ರಣದ ಬಗ್ಗೆ ಶಾಸಕರಿಂದ ತಾಲೂಕಿನ‌ ಪಂಚಾಯತ್ ಪ್ರತಿನಿಧಿಗಳ ಸಭೆ : ಸ್ವಯಂ ಘೋಷಿತ ಬಂದ್ ಮಾಡುವ ನಿರ್ಧಾರ

- Advertisement -
- Advertisement -

ಬೆಳ್ತಂಗಡಿ: ಎಲ್ಲೆಡೆ ಕಿಲ್ಲರ್ ಕೊರೊನಾ ತನ್ನ ರುದ್ರ ನರ್ತನ ಮುಂದುವರೆಸಿರುವ ಹಿನ್ನಲೆಯಲ್ಲಿ ಬೆಳ್ತಂಗಡಿ ತಾಲೂಕಿನಲ್ಲಿ ನಿಯಂತ್ರಣಕ್ಕಾಗಿ ಕೈಗೊಳ್ಳಬೇಕಾದ ಮುಂಜಾಗ್ರತೆ ಕ್ರಮಗಳ ಬಗ್ಗೆ ಹಾಗೂ ಲಾಕ್ ಡೌನ್ ಜಾರಿ ಮಾಡುವ ಕುರಿತು 48 ಗ್ರಾ.ಪಂ ವ್ಯಾಪ್ತಿ ಪ್ರತಿನಿಧಿಗಳ ಜೊತೆ ಸಮಾಲೋಚನಾ ಸಭೆ ಜು.11 ರಂದು ಎಸ್.ಡಿ.ಎಮ್ ಸಭಾಂಗಣದಲ್ಲಿ ಜರುಗಿತು.ಇಂದಿನ ಸಭೆಯಲ್ಲಿ ಕಡ್ಡಾಯ ಥರ್ಮಲ್ ಸ್ಕ್ಯಾನಿಂಗ್ ನಡೆಸಿ ಮಾಸ್ಕ್ ಮತ್ತು ಸಾಮಾಜಿಕ ಅಂತರ ಕೊಯ್ದುಕೊಳ್ಳುವುದನ್ನು ಖಾತ್ರಿ ಪಡಿಸಿದ್ದು ವಿಶೇಷವಾಗಿತ್ತು .

ಅಧ್ಯಕ್ಷತೆಯನ್ನು ಶಾಸಕ ಹರೀಶ್ ಪೂಂಜ ವಹಿಸಿದ್ದರು. ತಾಲೂಕನ್ನು ಕೊರೊನಾ ಮುಕ್ತ ತಾಲೂಕು ಆಗಿ ಪರಿವರ್ತಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರ ಪ್ರಯತ್ನ ಅಗತ್ಯ. ಕೊರೊನಾ ಹೆಚ್ಚಾಗದಂತೆ ಪ್ರತಿಯೊಬ್ಬರಲ್ಲಿ ಜಾಗೃತಿ ಮೂಡಿಸಬೇಕು. ಪ್ರತಿ ಬೂತ್ ನಲ್ಲಿ ಕೊರೊನಾ ಸೈನಿಕರ ತಂಡವನ್ನು ರಚಿಸಬೇಕು, ತಾಲೂಕಿನಲ್ಲಿ ಲಾಕ್ ಡೌನ್ ಜಾರಿ ಮಾಡುವ ಬಗ್ಗೆ ಅಭಿಪ್ರಾಯ ತಿಳಿಸಬೇಕು ಎಂದು ಹೇಳಿದರು.

ವೇದಿಕೆಯಲ್ಲಿ ತಹಶೀಲ್ದಾರ್ ಮಹೇಶ್ ಜೆ, ಕಾರ್ಯನಿರ್ವಾಹಣಾಧಿಕಾರಿ ಜಯರಾಮ್, ನ.ಪಂ ಮುಖ್ಯಾಧಿಕಾರಿ ಸುಧಾಕರ್, ಜಿ.ಪಂ ಸದಸ್ಯ ಕೊರಗಪ್ಪ ನಾಯ್ಕ, ಆರೋಗ್ಯಾಧಿಕಾರಿ ಡಾ.ಕಲಾಮಧು ಉಪಸ್ಥಿತರಿದ್ದರು.

ಸ್ವಯಂ ಘೋಷಿತ ಬಂದ್ ಮಾಡುವ ನಿರ್ಧಾರ
ಇಂದು ನಡೆದ ಸಭೆಯಲ್ಲಿ ಸೇರಿದ ಎಲ್ಲ ಪ್ರತಿನಿಧಿಗಳ ಒಕ್ಕೊರಲಿನ ಅಭಿಪ್ರಾಯ ದ ಮೇರೆಗೆ ತಾಲೂಕಿನಾದ್ಯಂತ ಮಧ್ಯಾಹ್ನ 2ಗಂಟೆವರೆಗೆ ಮಾತ್ರ ಅಂಗಡಿ ಗಳನ್ನು ತೆರೆಯುವುದು ಎಂಬ ತೀರ್ಮಾನ ವ್ಯಕ್ತವಾಯ್ತು. ಹಾಗೂ ತಾಲೂಕಿನ 9 ಖಾಸಗಿ ಆಸ್ಪತ್ರೆಗಳಲ್ಲಿ ಇನ್ನು ಮುಂದಕ್ಕೆ ಮಧ್ಯಾಹ್ನ 2 ಗಂಟೆಯಿಂದ ಮರುದಿನ ಬೆಳಿಗ್ಗೆ 8 ಗಂಟೆಯವರೆಗೆ ಹೊರರೋಗಿ ವಿಭಾಗ ಲಭ್ಯವಿರುವುದಿಲ್ಲ ಹಾಗು ತುರ್ತು ಸೇವೆ, ಅಪಘಾತ ವಿಭಾಗ, ನೋಂದಾವಣೆ ವಿಭಾಗಗಳು ಎಂದಿನಂತೆ 24 ಗಂಟೆ ಕರ್ತವ್ಯ ನಿರ್ವಹಿಸುವುದು ಎಂದು ನಿರ್ಧಾರ ಕೈಗೊಳ್ಳಲಾಯ್ತು. ಇದು ನಮ್ಮೆಲ್ಲೆರ ರಕ್ಷಣೆಗಾಗಿ ನಾವು ಮಾಡಿಕೊಳ್ಳುವ ಸ್ವಯಂ ರಕ್ಷಣಾ ಸೂತ್ರವಾಗಿದ್ದು ಯಾವುದೇ ಕಾನೂನಿನ ಖಡ್ಡಾಯವಿಲ್ಲ ಎಂದು ಶಾಸಕರು ಜನತೆಗೆ ತಿಳಿ ಹೇಳಿದರು. ಈ ಬಗ್ಗೆ ಸೋಮವಾರದಂದು ತಾಲೂಕಿನ ಎಲ್ಲಾ ಪಂಚಾಯತ್ ಗಳಲ್ಲಿ ಅಧಿಕೃತವಾಗಿ ಘೋಷಣೆ ಮಾಡಲಾಗುವುದು ಎಂದು ಶಾಸಕರು ತಿಳಿಸಿದರು.

ತಾಲೂಕಿನ ಪ್ರತಿ ಗ್ರಾಮ ಪಂಚಾಯತ್ ನಿಂದ ತಲಾ ಇಬ್ಬರು ಪ್ರತಿನಿಧಿಗಳು, ನ.ಪಂ, ತಾ.ಪಂ, ಜಿ.ಪಂ ಸದಸ್ಯರು ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು

- Advertisement -

Latest News

error: Content is protected !!