Saturday, August 15, 2026
Homeಕರಾವಳಿಮಂಗಳೂರುಮಂಗಳೂರಿನಲ್ಲಿ ಕೆಎಫ್ ಸಿ ಮಳಿಗೆ ಮೇಲೆ ಆಹಾರ ಸುರಕ್ಷಿತಾ ಇಲಾಖೆ ಅಧಿಕಾರಿಗಳ ದಾಳಿ

ಮಂಗಳೂರಿನಲ್ಲಿ ಕೆಎಫ್ ಸಿ ಮಳಿಗೆ ಮೇಲೆ ಆಹಾರ ಸುರಕ್ಷಿತಾ ಇಲಾಖೆ ಅಧಿಕಾರಿಗಳ ದಾಳಿ

- Advertisement -
- Advertisement -

ಮಂಗಳೂರು: ರಾಜ್ಯಾದ್ಯಂತ ನಡೆಯುತ್ತಿರುವ ಆಹಾರ ಸುರಕ್ಷಿತಾ ಇಲಾಖೆ ಅಧಿಕಾರಿಗಳ ದಾಳಿ ಮಂಗಳೂರಿನಲ್ಲಿಯೂ ಮುಂದುವರಿದಿದೆ.

ಮಂಗಳೂರು ನಗರದ ಕೆ.ಎಸ್. ರಾವ್ ರಸ್ತೆಯ ಸಿಟಿ ಸೆಂಟರ್ ನಲ್ಲಿರುವ ಕೆಎಫ್ ಸಿ ಮಳಿಗೆಗೆ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ಮಾಡಿದ್ದಾರೆ.

ಆನ್ ಲೈನ್ ಮೂಲಕ ಆರ್ಡರ್ ಮಾಡಿದ್ದ ಚಿಕನ್ ಕೊಳೆತು ಹೋಗಿದ್ದ ಬಗ್ಗೆ ಗ್ರಾಹಕರೊಬ್ಬರಿಂದ ದೂರು ಸ್ವೀಕೃತವಾಗಿದ್ದ ಹಿನ್ನೆಲೆಯಲ್ಲಿ ಕೆಎಫ್ ಸಿ ಮಳಿಗೆ ಮೇಲೆ ದಾಳಿ ನಡೆಸಲಾಗಿದೆ.

ಮಳಿಗೆಯಲ್ಲಿ ಪರಿಶೀಲನೆ ನಡೆಸಿರುವ ಆಹಾರ ಸುರಕ್ಷಿತಾ ಇಲಾಖೆ ಅಧಿಕಾರಿಗಳು ಚಿಕನ್ ಹಾಗೂ ಎಣ್ಣೆ ಸ್ಯಾಂಪಲ್ ಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಿದ್ದು, ಮಾರ್ಚ್ ಮತ್ತು ಎಪ್ರಿಲ್ ತಿಂಗಳುಗಳಲ್ಲಿ ಪ್ಯಾಕ್ ಮಾಡಲಾದ ಕೋಳಿ ಮಾಂಸ ಪತ್ತೆಯಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಪ್ರಯೋಗಾಲಯದ ವರದಿ ಬಳಿಕ ಅಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳು ಮುಂದಿನ ಕ್ರಮ ಜರುಗಿಸಲಿದ್ದು, ಸದ್ಯ ಕೆಎಫ್ ಸಿ ಮಳಿಗೆಯನ್ನು ಕ್ಲೋಸ್ ಮಾಡಲಾಗಿದೆ.

- Advertisement -

Latest News

error: Content is protected !!