Monday, May 13, 2024
Homeಇತರಬೆಂಗಳೂರಿನಲ್ಲಿ 11 ಸಾವಿರ ಕೊರೊನಾ ಸೋಂಕಿತರು ನಾಪತ್ತೆ

ಬೆಂಗಳೂರಿನಲ್ಲಿ 11 ಸಾವಿರ ಕೊರೊನಾ ಸೋಂಕಿತರು ನಾಪತ್ತೆ

spot_img
- Advertisement -
- Advertisement -

ಬೆಂಗಳೂರು: ರಾಜಧಾನಿ ಬೆಂಗಳೂರಲ್ಲಿ 11 ಸಾವಿರ ಕೊರೋನಾ ಸೋಂಕಿತರು ನಾಪತ್ತೆಯಾಗಿದ್ದಾರೆ. ಇವರು ಎಲ್ಲಿ ಹೋದರು? ಏನಾದರೂ? ಇವರು ಇತರೆ ಅದೆಷ್ಟು ಜನರಿಗೆ ಸೋಂಕನ್ನು ಹರಡಿಸಿರುತ್ತಾರೋ ಗೊತ್ತಿಲ್ಲ ಎಂದು ಸಾರ್ವಜನಿಕ ಲೆಕ್ಕ ಪತ್ರ ಸಮಿತಿ ಅಧ್ಯಕ್ಷ ಹಾಗೂ ಮಾಜಿ ಸಚಿವ ಹೆಚ್ ಕೆ ಪಾಟೀಲ ಆತಂಕ ವ್ಯಕ್ತಪಡಿಸಿದ್ದಾರೆ.

ವಿಧಾನಸೌಧದಲ್ಲಿ ಮಾತನಾಡಿದ ಅವರು, ಸರ್ಕಾರ ಇವರನ್ನು ಹುಡುಕುವ ಯಾವ ಪ್ರಯತ್ನವನ್ನೂ ಮಾಡ್ತಿಲ್ಲ. ಇಂತಹ ಸಂದರ್ಭದಲ್ಲಿ ಬೆಂಗಳೂರು ಪೊಲೀಸ್ ಆಯುಕ್ತರು ನಾಪತ್ತೆಯಾದವರನ್ನು ಹುಡುಕುವುದನ್ನು ಬಿಟ್ಟು ಆಹಾರ ಕಿಟ್​ಗಳ ವಿತರಣೆಯಲ್ಲಿ ಮಗ್ನರಾಗಿದ್ದರು ಎಂದು ಅಸಮಾಧಾನ ಹೊರಹಾಕಿದ್ದಾರೆ. ತಪ್ಪು ದೂರವಾಣಿ ನಂಬರ್, ವಿಳಾಸ ನೀಡಿ ತಪ್ಪಿಸಿಕೊಂಡಿದ್ದಾರೆ. ಸೋಂಕಿತರು ತಪ್ಪಿಸಿಕೊಂಡವರಿಂದ ಎಷ್ಟು ಜನರಿಗೆ ಸೋ‌ಂಕು ಹರಡುವುದನ್ನು‌ ತಡೆಯುವ ಪ್ರಯತ್ನ ಮಾಡಲಿಲ್ಲ. ಮೇಲ್ವಿಚಾರಣೆ ತಂಡ, ನಿಗಾ ಘಟಕಗಳು ಸಮರ್ಪಕವಾಗಿ ಕೆಲಸ‌ ಮಾಡುತ್ತಿಲ್ಲ. ಆರೋಗ್ಯ ಸಚಿವ ಶ್ರೀರಾಮುಲು ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಅವರು ನಾಪತ್ತೆಯಾದ ಕೋವಿಡ್ ಸೋಂಕಿತರ ಬಗ್ಗೆ ಜನರಿಗೆ ಉತ್ತರ ನೀಡಬೇಕಿದೆ.

ಸರ್ಕಾರ ಇಪ್ಪತ್ತನಾಲ್ಕು ಗಂಟೆಯ ಒಳಗೆ ಉತ್ತರ ನೀಡಬೇಕು. ಸಾರ್ವಜನಿಕರಿಗೆ ಸಮರ್ಪಕ ಮಾಹಿತಿ‌ ನೀಡಬೇಕು ಎಂದು ಒತ್ತಾಯಿಸಿದರು. ಇದರ ಜೊತೆಗೆ ಕೋವಿಡ್ ಸೋಂಕಿತರಿಗೆ ಸಾಕಷ್ಟು ತೊಂದರೆ ಆಗುತ್ತಿದೆ. ಇದರಿಂದ ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ. ಈ ಬಗ್ಗೆ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರನ್ನು ಭೇಟಿ ಮಾಡಿ ಸಮಗ್ರ ಮಾಹಿತಿ ನೀಡಿದ್ದೇನೆ ಎಂದು ಎಚ್.ಕೆ.ಪಾಟೀಲ್ ತಿಳಿಸಿದರು.

- Advertisement -
spot_img

Latest News

error: Content is protected !!