Saturday, June 6, 2026
Homeತಾಜಾ ಸುದ್ದಿವ್ಯಾಪಾರಿಯನ್ನು ಅಡ್ಡಗಟ್ಟಿ 1.8 ಲಕ್ಷ ರೂಪಾಯಿ ದರೋಡೆ!.. ರಾಜ್ಯವನ್ನೇ ಬೆಚ್ಚಿ ಬೀಳಿಸಿದ ಘಟನೆ ನಡೆದಿದ್ದೆಲ್ಲಿ?

ವ್ಯಾಪಾರಿಯನ್ನು ಅಡ್ಡಗಟ್ಟಿ 1.8 ಲಕ್ಷ ರೂಪಾಯಿ ದರೋಡೆ!.. ರಾಜ್ಯವನ್ನೇ ಬೆಚ್ಚಿ ಬೀಳಿಸಿದ ಘಟನೆ ನಡೆದಿದ್ದೆಲ್ಲಿ?

- Advertisement -
- Advertisement -

ಮೈಸೂರು: ಇಲ್ಲಿನ ದಳವಾಯಿ ಶಾಲೆ ಸಮೀಪ ವ್ಯಾಪಾರಿಯೋರ್ವರನ್ನು ಅಡ್ಡಗಟ್ಟಿ 1.8 ಲಕ್ಷ ರೂಪಾಯಿ ದರೋಡೆ ಮಾಡಿದ ಘಟನೆ ವರದಿಯಾಗಿದೆ.ಹಣ ಕಳೆದುಕೊಂಡವರನ್ನು ಚಾಮರಾಜ ಮೊಹಲ್ಲಾ ಪ್ರೇಮಕುಮಾರ್ ಎನ್ನಲಾಗಿದೆ.ರಾತ್ರಿ ವ್ಯಾಪಾರ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದ ಅವರನ್ನು ಅಂಗಡಿಯಿಂದ ಇಬ್ಬರು ಹಿಂಬಾಲಿಸಿಕೊಂಡು ಬಂದು,ದಳವಾಯಿ ಸಮೀಪ ಅಡ್ಡಹಾಕಿ ಅವರ ಮೇಲೆ ಹಲ್ಲೆ ಮಾಡಿದ್ದು ಹಣ ಕಸಿದುಕೊಂಡು ಪರಾರಿಯಾಗಿದ್ದಾರೆ.

ಅವರನ್ನು ದ್ವಿಚಕ್ರವಾಹನದಿಂದ ಕೆಳಗೆ ಬೀಳಿಸಿ ಹಲ್ಲೆ ಮಾಡಿರುವ ಘಟನೆಯ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

- Advertisement -

Latest News

error: Content is protected !!