Saturday, June 6, 2026
Homeಚಿಕ್ಕಮಗಳೂರುಚಿಕ್ಕಮಗಳೂರು; ಮುಳ್ಳುಹಂದಿ ಶಿಕಾರಿಗೆ ಹೋದ ಇಬ್ಬರು ಯುವಕರು ಸಾವು

ಚಿಕ್ಕಮಗಳೂರು; ಮುಳ್ಳುಹಂದಿ ಶಿಕಾರಿಗೆ ಹೋದ ಇಬ್ಬರು ಯುವಕರು ಸಾವು

- Advertisement -
- Advertisement -

ಚಿಕ್ಕಮಗಳೂರು: ಮುಳ್ಳು ಹಂದಿ ಶಿಕಾರಿಗೆ ಹೋದ ಇಬ್ಬರು  ಯುವಕರು ಸಾವನ್ನಪ್ಪಿರುವ ಘಟನೆ ಮೂಡಿಗೆರೆ ತಾಲೂಕಿನ ಬಾಳೂರು ಹೋಬಳಿಯ ಮಾಳಿಗನಾಡು ಎಂಬಲ್ಲಿ ಸಂಭವಿಸಿದೆ.

ತಮಿಳುನಾಡು ಮೂಲದ ವಿಜಯ್ (28), ಶರತ್ (26) ಸಾವನ್ನಪ್ಪಿದ ಯುವಕರು. ಇವರು ಮಾಳಿಗನಾಡು ಸಮೀಪದ ಆನೆಗುಂಡಿ ಎಸ್ಟೇಟ್ ನಲ್ಲಿ ಕೆಲಸ ಮಾಡುತ್ತಿದ್ದರು. ಮುಳ್ಳು ಹಂದಿ ಶಿಕಾರಿ ಮಾಡಲು ಗುಡ್ಡಕ್ಕೆ ತೆರಳಿದ್ದರು ಎನ್ನಲಾಗಿದೆ. ಈ ವೇಳೆ ಹಂದಿ ಸುರಂಗದ ಒಳಗೆ ಹೋಗಿದ್ದನ್ನು ಕಂಡ  ಯುವಕರು ಸುರಂಗದ ಒಳಗೆ ಹೊಗೆ ಹಾಕಿ ಸುರಂಗದ ಒಳಗೆ ನುಗ್ಗಿದ್ದಾರೆ. ಪರಿಣಾಮ ಹೊಗೆಯಿಂದ ಉಸಿರಾಡಲು ಸಾಧ್ಯವಾಗದೆ ಗುಹೆಯೊಳಗೆ ಮೃತಪಟ್ಟಿದ್ದಾರೆ.

ಸ್ಥಳಕ್ಕೆ ಬಾಳೂರು ಸಬ್ ಇನ್ಸ್ಪೆಕ್ಟರ್ ಪವನ್ ಕುಮಾರ್, ಪೊಲೀಸರು, ಮತ್ತು ಸ್ಥಳೀಯರು ಗುಹೆಯೊಳಗೆ ನುಗ್ಗಿ ಶವಗಳನ್ನು ಹೊರತೆಗೆದಿದ್ದಾರೆ. ಮೂಡಿಗೆರೆ ತಾಲ್ಲೂಕಿನ ಬಾಳೂರು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!