Saturday, May 4, 2024
Homeಕರಾವಳಿಕಡಬ; ಶ್ರೀಗಂಧ ಹಾಗೂ ವಾಹನ ಕಳವು ಪ್ರಕರಣದಲ್ಲಿ 38 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ

ಕಡಬ; ಶ್ರೀಗಂಧ ಹಾಗೂ ವಾಹನ ಕಳವು ಪ್ರಕರಣದಲ್ಲಿ 38 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ

spot_img
- Advertisement -
- Advertisement -

ಕಡಬ : ಶ್ರೀಗಂಧ ಹಾಗೂ ವಾಹನ ಕಳವು ಪ್ರಕರಣದಲ್ಲಿ 38 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಕಡಬ ಪೊಲೀಸರು ಬಂಧಿಸಿದ್ದಾರೆ. ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕು  ಕಾಡೂರು ಕೊಡಿಗೆ ಗ್ರಾಮದ ಅಬೂಬಕ್ಕರ್ (63) ಬಂಧಿತ ಆರೋಪಿ.

1984 ರಲ್ಲಿ ಕಡಬ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ   ಶ್ರೀಗಂಧ ಹಾಗೂ ವಾಹನ ಕಳವು ಮಾಡಿದ ಬಗ್ಗೆ ಆರೋಪಿಯ ವಿರುದ್ದ ಅರಣ್ಯ ಕಾಯ್ದೆ ಹಾಗೂ ಕಳ್ಳತನ ಪ್ರಕರಣ ದಾಖಲಾಗಿತ್ತು. ಸುಮಾರು 38 ವರ್ಷಗಳಷ್ಟು ಹಳೇಯ ಈ ಕೇಸಿನಲ್ಲಿ ಆರೋಪಿ ಪತ್ತೆಯಾಗದ ಹಿನ್ನಲೆಯಲ್ಲಿ ನ್ಯಾಯಾಲಯವು ದೀರ್ಘ ಕಾಲದಿಂದ ಬಾಕಿ ಇರುವ ಪ್ರಕರಣ ಎಂದು ಪರಿಗಣಿಸಿ ಕಡತವನ್ನು ಮುಕ್ತಾಯಗೊಳಿಸಿತ್ತು

ಆದರೇ ಕಡಬ ಠಾಣೆಯ ಸಬ್‌ ಇನ್ಸ್ಪೆಕ್ಟರ್‌  ಹಾಗೂ ಶೋಧ ಕಾರ್ಯಾಚರಣೆ ನಡೆಸಿದ ತಂಡದ ವಿಶೇಷ ಪ್ರಯತ್ನದಿಂದ ಆರೋಪಿಯನ್ನು ಬಂಧಿಸಲಾಗಿದೆ. ನ್ಯಾಯಾಲಯವು ಈ ಪ್ರಕರಣದ ಮರು ವಿಚಾರಣೆ ನಡೆಸಲಿದ್ದು ಇದಕ್ಕೆ ಶ್ರಮಿಸಿದ ಪೊಲೀಸ್‌ ಇಲಾಖೆಯ ಸಿಬ್ಬಂದಿಗೆ ಸೂಕ್ತ ಬಹುಮಾನ ನೀಡಲಾಗುವುದೆಂದು ದ.ಕ. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ತಿಳಿಸಿದ್ದಾರೆ.

ಆರೋಪಿಯನ್ನು  ಮೂಡಿಗೆರೆ ತಾಲೂಕು ಬಾಳೂರು  ಎಂಬಲ್ಲಿ ಪತ್ತೆ ಹಚ್ಚಿ ದಸ್ತಗಿರಿ ಮಾಡಲಾಗಿದೆ. ಈ  ಕಾರ್ಯಾಚರಣೆಯಲ್ಲಿ ಕಡಬ ಠಾಣೆಯ ಹೆಡ್‌ ಕಾನ್ಸ್ಟೇಬಲ್‌ ಗಳಾದ ರಾಜು ನಾಯಕ್, ಭವಿತ್ ರಾಜ್ ಸಿಬ್ಬಂದಿ ಸಿರಾಜುದ್ದೀನ್  ಭಾಗಿಯಾಗಿದ್ದರು. ಆರೋಪಿಯ ವಿರುದ್ದ ರಾಣೇಬೆನ್ನೂರು ಹಾಗೂ ಮೈಸೂರು ವಿವಿ ಪುರಂ ಠಾಣೆಗಳಲ್ಲಿ  ಇನ್ನೆರಡು ಪ್ರಕರಣಗಳಿದ್ದೂ ವಾರೆಂಟ್‌ ಜಾರಿಯಾಗಿದೆ.

- Advertisement -
spot_img

Latest News

error: Content is protected !!