Thursday, June 4, 2026
Homeತಾಜಾ ಸುದ್ದಿನಿದ್ದೆ ಬರ್ತಿಲ್ಲ ಅಂತಾ ಪೊಲೀಸ್ ಠಾಣೆಗೆ ಪತ್ರ ಬರೆದ ಯುವಕ : ಆಮೇಲೇನಾಯ್ತು ಗೊತ್ತಾ?

ನಿದ್ದೆ ಬರ್ತಿಲ್ಲ ಅಂತಾ ಪೊಲೀಸ್ ಠಾಣೆಗೆ ಪತ್ರ ಬರೆದ ಯುವಕ : ಆಮೇಲೇನಾಯ್ತು ಗೊತ್ತಾ?

- Advertisement -
- Advertisement -

ಹಾವೇರಿ: ತನಗೆ ನಿದ್ದೆ ಬರ್ತಿಲ್ಲ ಅಂತಾ ಯುವಕನೊಬ್ಬ ಪೊಲೀಸ್ ಠಾಣೆಗೆ ಪತ್ರ ಬರೆದ ಘಟನೆ ಹಾವೇರಿಯಲ್ಲಿ ನಡೆದಿದೆ.

ಹಾವೇರಿ ಜಿಲ್ಲೆಯ ಹಾನಗಲ್‌ ತಾಲೂಕಿನ ಕಾಲ್ವೆಕಲ್ಲಾಪುರ ಗ್ರಾಮದ ವೀರಯ್ಯ ಹಿರೇಮಠ ಎಂಬ ಯುವಕ ನನಗೆ ಯಾರೋ ಮಾಟ ಮಂತ್ರ ಮಾಡಿಸಿದ್ದಾರೆ, ಮೈ ಕೈ ಕಾಲುಗಳಲ್ಲಿ ನೋವು ಕಾಣಿಸಿಕೊಳ್ಳುತ್ತವೆ. ಮೈಯಲ್ಲಿ ಆತ್ಮಗಳು ಬರುತ್ತವೆ ಎಂದು ಆಡೂರು ಪೊಲೀಸ್ ಠಾಣೆಯ ಪಿಎಸ್‌ಐಗೆ ವೀರಯ್ಯ ಪತ್ರ ಬರೆದಿದ್ದಾನೆ. ವೀರಯ್ಯ ಹಿರೇಮಠ ಪತ್ರವನ್ನು ನೋಡಿದ ಪೋಲಿಸರು ಬೆಚ್ಚಿ ಬಿದಿದ್ದಾರೆ.

ಇನ್ನೂ ವೀರಯ್ಯ ತನ್ನ ಸಮಸ್ಯೆಯನ್ನು ಹಾವೇರಿ,ಶಿಗ್ಗಾವಿ,ಮಣಿಪಾಲ ಹುಬ್ಬಳ್ಳಿ ಸೇರಿದಂತೆ ವಿವಿಧ ಆಸ್ಪತ್ರೆಗಳಲ್ಲಿ ತೋರಿಸಿದ್ದರು ಕೂಡ ವೈದ್ಯರು ನಾರ್ಮಲ್‌ ಆಗಿದ್ದೀಯಾ ಅಂಥ ಹೇಳಿದ್ದಾರೆ. ಇದಲ್ಲದೇ ವೀರಯ್ಯನನ್ನು ಆತನ ಹೆತ್ತವರು ಜ್ಯೋತಿಷಿಗಳ ಬಳಿ ಕರೆದುಕೊಂಡು ಹೋದ ಬಳಿಕ ಆತನ ವರ್ತನೆಯಲ್ಲಿ ತುಸು ಬದಲಾವಣೆಯಾಗಿದೆಯುಂತೆ. ಇದೀಗ ಇತನ ಪತ್ರ ನೋಡಿದ ಪೊಲೀಸರು ತಲೆ ಚಚ್ಚಿಕೊಳ್ಳುತ್ತಿದ್ದಾರೆ.

- Advertisement -

Latest News

error: Content is protected !!