Wednesday, May 8, 2024
Homeಕರಾವಳಿಉಡುಪಿಕೊಂಕಣ ರೈಲ್ವೆಗೆ ಮಾರ್ಚ್ ತಿಂಗಳಲ್ಲಿ 55.59 ಲಕ್ಷ ರೂ. ದಂಡ ಸಂಗ್ರಹ; ಟಿಕೆಟ್ ಇಲ್ಲದೇ ಪ್ರಯಾಣಿಸುವವರನ್ನು...

ಕೊಂಕಣ ರೈಲ್ವೆಗೆ ಮಾರ್ಚ್ ತಿಂಗಳಲ್ಲಿ 55.59 ಲಕ್ಷ ರೂ. ದಂಡ ಸಂಗ್ರಹ; ಟಿಕೆಟ್ ಇಲ್ಲದೇ ಪ್ರಯಾಣಿಸುವವರನ್ನು ಪತ್ತೆಹಚ್ಚಲು ವಿಶೇಷ ತಂಡ

spot_img
- Advertisement -
- Advertisement -

ಉಡುಪಿ : ಟಿಕೇಟ್ ರಹಿತವಾಗಿ ಪ್ರಯಾಣಿಸುವವರ ವಿರುದ್ಧ ವಿಶೇಷ ಅಭಿಯಾನವನ್ನೇ ಪ್ರಾರಂಭಿಸಿರುವ ಕೊಂಕಣ ರೈಲ್ವೆ, ಕಳೆದ ಮಾರ್ಚ್ ತಿಂಗಳು ಒಂದರಲ್ಲೇ 55.59 ಲಕ್ಷ ರೂ.ಗಳನ್ನು ದಂಡದ ರೂಪದಲ್ಲಿ ಸಂಗ್ರಹಿಸಿದೆ ಎಂದು ಕೊಂಕಣ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ.

ಈ ಒಂದು ತಿಂಗಳ ಅವಧಿಯಲ್ಲಿ ಒಟ್ಟು 8633 ಮಂದಿ ಟಿಕೆಟ್ ಇಲ್ಲದೇ ಪ್ರಯಾಣಿಸುವವರನ್ನು ಪತ್ತೆ ಹಚ್ಚಿದ್ದು, ಇದಕ್ಕಾಗಿಯೇ ನೇಮಕಗೊಂಡಿರುವ ವಿಶೇಷ ತಂಡದ ರೈಲು ಟಿಕೇಟ್ ಪರೀಕ್ಷಕರು (ಟಿಟಿಇ) ಒಟ್ಟು 55.59 ಲಕ್ಷ ರೂ.ಗಳ ದಂಡ ವಸೂಲು ಮಾಡಿದ್ದಾರೆ. ಆದುದರಿಂದ ಕೊಂಕಣ ರೈಲ್ವೆಯಲ್ಲಿ ಪ್ರಯಾಣಿಸುವ ಎಲ್ಲಾ ಪ್ರಯಾಣಿಕರು ಅಧಿಕೃತ ಟಿಕೇಟ್ ಪಡೆದು ಪ್ರಯಾಣಿಸುವಂತೆ ಕೊಂಕಣ ರೈಲ್ವೆ ಪ್ರಕಟಣೆಯಲ್ಲಿ ಮನವಿ ಮಾಡಿದೆ.

- Advertisement -
spot_img

Latest News

error: Content is protected !!