Wednesday, June 3, 2026
Homeಕರಾವಳಿಮಂಗಳೂರುಮಂಗಳೂರು: ರಿಂಗ್ ಆದ ಖಾಸಗಿ ಮೆಡಿಕಲ್ ಕಾಲೇಜಿನ ಲೇಡಿಸ್ ಟಾಯ್ಲೆಟ್ ನಲ್ಲಿ ಇರಿಸಿದ್ದ ಮೊಬೈಲ್ ಫೋನ್;...

ಮಂಗಳೂರು: ರಿಂಗ್ ಆದ ಖಾಸಗಿ ಮೆಡಿಕಲ್ ಕಾಲೇಜಿನ ಲೇಡಿಸ್ ಟಾಯ್ಲೆಟ್ ನಲ್ಲಿ ಇರಿಸಿದ್ದ ಮೊಬೈಲ್ ಫೋನ್; ಅಪ್ರಾಪ್ತ ಯುವಕ ಅರೆಸ್ಟ್

- Advertisement -
- Advertisement -

ಮಂಗಳೂರು: ವೈದ್ಯಕೀಯ ಕಾಲೇಜಿನ ಮಹಿಳಾ ಶೌಚಾಲಯದಲ್ಲಿ ಮೊಬೈಲ್ ಫೋನ್ ಇರಿಸಿ ಚಿತ್ರೀಕರಣ ಮಾಡಿದ ಆರೋಪದ ಮೇಲೆ 17 ವರ್ಷದ ಬಾಲಕನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.

ಮಂಗಳೂರಿನ ಬಾವುಟಗುಡ್ಡೆಯಲ್ಲಿರುವ ಖಾಸಗಿ ಮೆಡಿಕಲ್ ಕಾಲೇಜಿನಲ್ಲಿ ಮೇ‌ 6 ರಂದು ಈ ಘಟನೆ ನಡೆದಿದೆ.

ಮೆಡಿಕಲ್ ಕಾಲೇಜಿಗೆ ರೋಗಿಯಂತೆ ಬಂದಿದ್ದ ಅಪ್ರಾಪ್ತ ಯುವಕ ಮಹಿಳಾ ಶೌಚಾಲಯಕ್ಕೆ ಹೋಗಿ ಅಲ್ಲಿ ಮೊಬೈಲ್ ಫೋನ್ ಇರಿಸಿದ್ದನು ಎನ್ನಲಾಗಿದೆ.

ಶೌಚಾಲಯದ ಒಳಗಿನಿಂದ ಮೊಬೈಲ್ ಫೋನ್ ರಿಂಗ್ ಆಗಿದ್ದು, ಆಗ ಮೆಡಿಕಲ್ ಕಾಲೇಜಿನ ಕಾವಲುಗಾರ ಪರಿಶೀಲಿಸಿದಾಗ ಮೊಬೈಲ್ ಫೋನ್ ಪತ್ತೆಯಾಗಿದೆ.

ಕಾಲೇಜಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಿದಾಗ ಅಪ್ರಾಪ್ತ ಯುವಕನ ಕೃತ್ಯ ಬಯಲಿಗೆ ಬಂದಿದೆ.ನಂತರ ವಾಚ್ ಮೆನ್ ಬಂದರು ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಯುವಕನನ್ನು ಬಂಧಿಸಿದ್ದಾರೆ

- Advertisement -

Latest News

error: Content is protected !!