Friday, June 5, 2026
Homeಕರಾವಳಿಉಪ್ಪಿನಂಗಡಿಯಲ್ಲಿ ನೇತ್ರಾವತಿ ಸೇತುವೆಯಿಂದ ಹಾರಿ ಯುವಕ‌ ಆತ್ಮಹತ್ಯೆ

ಉಪ್ಪಿನಂಗಡಿಯಲ್ಲಿ ನೇತ್ರಾವತಿ ಸೇತುವೆಯಿಂದ ಹಾರಿ ಯುವಕ‌ ಆತ್ಮಹತ್ಯೆ

- Advertisement -
- Advertisement -

ಉಪ್ಪಿನಂಗಡಿ: ಇಲ್ಲಿನ ನೇತ್ರಾವತಿ ಸೇತುವೆಯಿಂದ ಹಾರಿ ವ್ಯಕ್ತಿಯೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ‌ನಿನ್ನೆ ಸಂಜೆ ನಡೆದಿದೆ. ಗದಗ ನಿವಾಸಿ ಭರಮಪ್ಪ (31) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ.

ಈತ ಕೂಲಿ ಕಾರ್ಮಿಕನಾಗಿದ್ದು, ಕುಟುಂಬದ ಜೊತೆ ಸರಳೀಕಟ್ಟೆಯ ಮೂಡಡ್ಕ ಎಂಬಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ.

ನಿನ್ನೆ ಕೂಲಿ ಕೆಲಸಕ್ಕೆಂದು ಹೋದ ಈತ ಕಣ್ಣಿಗೆ ಬಟ್ಟೆ ಕಟ್ಟಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತಕ್ಷಣ ಮಾಹಿತಿ ತಿಳಿದು ಸ್ಥಳೀಯ ಯುವಕರಾದ ಇಸುಬು, ನವಾಝ್ ,ಪಯಾಝ್ ಸೇರಿ ‌ಹಲವರು ರಕ್ಷಣೆಗೆ ಧಾವಿಸಿದ್ದಾರೆ. ಆದರೆ ಈ ವೇಳೆ ಭರಮಪ್ಪ ಮೃತಪಟ್ಟಿದ್ದರು.

ಈ‌ ಕುರಿತು ಉಪ್ಪಿನಂಗಡಿ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಆತ್ಮಹತ್ಯೆಗೆ ಙಿಖರ ಕಾರಣ ತಿಳಿದು ಬಂದಿಲ್ಲ‌.

- Advertisement -

Latest News

error: Content is protected !!