Friday, June 5, 2026
Homeಕರಾವಳಿಮಂಗಳೂರು: ಮಾವಿನಹಣ್ಣು‌ ಕೊಯ್ಯುವಾಗ ವಿದ್ಯುತ್ ತಂತಿ‌ ತಗುಲಿ ಯುವಕ‌ ಸಾವು

ಮಂಗಳೂರು: ಮಾವಿನಹಣ್ಣು‌ ಕೊಯ್ಯುವಾಗ ವಿದ್ಯುತ್ ತಂತಿ‌ ತಗುಲಿ ಯುವಕ‌ ಸಾವು

- Advertisement -
- Advertisement -

ಉಳ್ಳಾಲ: ಮಾವಿನ ಹಣ್ಣು ಕೊಯ್ಯುವಾಗ ವಿದ್ಯುತ್ ತಂತಿ ತಗುಲಿ ವಿದ್ಯುತ್ ತಂತಿ ಯುವಕ ಸಾವನ್ನಪ್ಪಿರುವ ಘಟನೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಜಲಾಲ್ ಬಾಗ್ ನಲ್ಲಿ ಇಂದು ಸಂಜೆ ವೇಳೆ ನಡೆದಿದೆ.

ಮಹಮ್ಮದ್ ಇಲಿಯಾಸ್ (21) ಮೃತ ದುರ್ದೈವಿ. ಸಂಜೆ ವೇಳೆ ಮನೆ ಸಮೀಪದ ಕಾಂಪೌಂಡಿನಲ್ಲಿರುವ ಮಾವಿನಮರಕ್ಕೆ ಹಣ್ಣು ಕೀಳಲೆಂದು ತೆರಳಿದಾಗ ಘಟನೆ ನಡೆದಿದೆ.

ಯುವಕನ ಸಾವಿಗೆ ಮೆಸ್ಕಾಂ ಇಲಾಖೆಯೇ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ‌ . ಮಾವಿನ ಮರದ ಮೇಲೆ ವಿದ್ಯುತ್ ತಂತಿ ಹಾದುಹೋಗಿದ್ದರೂ ಅದನ್ನು ಕಟಾವು ನಡೆಸದೆ ಇದ್ದುದರಿಂದ ಘಟನೆ ನಡೆದಿರುವುದಾಗಿ ಆರೋಪಿಸಿದ್ದಾರೆ.

- Advertisement -

Latest News

error: Content is protected !!