Thursday, April 25, 2024
Homeಅಪರಾಧಕಡಬ: ಸರಕಾರಿ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಶಿಕ್ಷಕರಿಂದ ಥಳಿತ - ಆಸ್ಪತ್ರೆಗೆ ದಾಖಲಾದ ಮಕ್ಕಳು

ಕಡಬ: ಸರಕಾರಿ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಶಿಕ್ಷಕರಿಂದ ಥಳಿತ – ಆಸ್ಪತ್ರೆಗೆ ದಾಖಲಾದ ಮಕ್ಕಳು

spot_img
- Advertisement -
- Advertisement -

ಕಡಬ: ಸರಕಾರಿ ಪ್ರೌಢ ಶಾಲೆಯ ಶಿಕ್ಷಕರೋರ್ವರು ಥಳಿಸಿದ್ದಾರೆ ಎಂದು ಆರೋಪಿಸಿ 8ನೇ ತರಗತಿಯ ಇಬ್ಬರು ವಿದ್ಯಾರ್ಥಿಗಳು ಕಡಬ ಸಮುದಾಯ ಆಸ್ಪತ್ರೆಗೆ ದಾಖಲಾದ ಘಟನೆ ಜೂ.24 ರಂದು ನಡೆದಿದೆ.


ಎಂಟನೆ ತರಗತಿಯ ಸುದೀಶ್ ಮತ್ತು ದಿಗಂತ್ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ, ಇವರಿಗೆ ಈ ಶಾಲೆಯ ಶಿಕ್ಷಕ ಖಾದರ್ ಎಂಬವರು ಕೆನ್ನೆಗೆ ಥಳಿಸಿದ್ದು ವಿದ್ಯಾರ್ಥಿಗಳ ಕೆನ್ನೆ ಊದಿಕೊಂಡಿದ್ದು,ಅಸ್ವಸ್ಥರಾಗಿದ್ದಾರೆ.

ಇದೀಗ ಶಿಕ್ಷಕರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ವಿದ್ಯಾರ್ಥಿಗಳ ಪೋಷಕರು ಕ್ಷೇತ್ರ ಶಿಕ್ಷಣಾಧಿಕಾರಿಯವರಿಗೆ ಆಗ್ರಹಿಸಿದ್ದಾರೆ.


ಈ ಬಗ್ಗೆ ಉಪ ಪ್ರಾಂಶುಪಾಲೆ ವೇದಾವತಿಯ ವರು ಪ್ರತಿಕ್ರಿಯೆ ನೀಡಿ, ನಾನು ವಿದ್ಯಾರ್ಥಿಗಳನ್ನು ಭೇಟಿಯಾಗಿ ವಿಚಾರಿಸಿದ್ದೇನೆ, ವಿದ್ಯಾರ್ಥಿಗಳು ಆರೋಗ್ಯವಾಗಿದ್ದಾರೆ, ಶಿಕ್ಷಕರು ಥಳಿಸಿರುವ ಬಗ್ಗೆ ವಿಚಾರಿಸುತ್ತೇನೆ ಎಂದು ಅವರು ಹೇಳಿದ್ದಾರೆ.

- Advertisement -
spot_img

Latest News

error: Content is protected !!