Friday, June 5, 2026
HomeUncategorizedಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಗುದ್ದಿದ ಕಾರ್; ಓರ್ವ ಸ್ಥಳದಲ್ಲೇ ಸಾವು

ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಗುದ್ದಿದ ಕಾರ್; ಓರ್ವ ಸ್ಥಳದಲ್ಲೇ ಸಾವು

- Advertisement -
- Advertisement -

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಹಾರೋಗೊಪ್ಪ ಗ್ರಾಮದ ಬಿ.ಕ್ಯಾಂಪ್ಸ ಸಮೀಪದ ಶಿವಮೊಗ್ಗ ರಸ್ತೆಯಲ್ಲಿ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಗುದ್ದಿದ ಘಟನೆ ಸಂಭವಿಸಿದೆ. ಘಟನೆಯ ಪರಿಣಾಮ ಓರ್ವ ವ್ಯಕ್ತಿ ಸ್ಥಳದಲ್ಲಿಯೇ ದುರ್ಮರಣಕ್ಕೀಡಾಗಿದ್ದಾನೆ.

ಕಾರು ಚಾಲನೆ ನಡೆಸುತ್ತಿದ್ದ 60 ವರ್ಷ ಪ್ರಾಯದ ಇಂಜಿನಿಯರ್ ಅಶೋಕ್ ಕಾರಿನ ಮೇಲಿನ ನಿಯಂತ್ರಣವನ್ನು ಕಳೆದುಕೊಂಡು ಕಾರನ್ನು ಮರಕ್ಕೆ ಗುದ್ದಿ ಮೃತಹೊಂದಿದ್ದಾರೆ.

ಅವರು ಕೆಪಿಟಿಸಿಎಲ್ ನಲ್ಲಿ ಇಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದು, ಈ ತಿಂಗಳಿನ ಕೊನೆಯಲ್ಲಿ ಅವರು ನಿವೃತ್ತಿ ಹೊಂದಲಿದ್ದರು ಎನ್ನಲಾಗಿದೆ. ಆದರೆ ಈ ಅವಘಡದಲ್ಲಿ ದಾರುಣವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಾರಿನಲ್ಲಿ ಅಶೋಕ್ ಅವರೊಂದಿಗೆ ಪ್ರಯಾಣ ನಡೆಸುತ್ತಿದ್ದ ಕುಟುಂಬ ಸದಸ್ಯರಾದ ಕಮಲಮ್ಮ, ಕಾಲೇಜು ಉಪನ್ಯಾಸಕರಾದ ವಿಜಯ್ ಕುಮಾರ್, ಹಾಗೂ ಗಂಗಾಧರ್ ಅವರಿಗೂ ಗಾಯಗಳಾಗಿದ್ದು, ಗಾಯಾಳುಗಳನ್ನು ಶಿವಮೊಗ್ಗದ ಅಸ್ಪತ್ರೆಗೆ ದಾಖಲು
ಮಾಡಿ ಚಿಕಿತ್ಸೆಗೊಳಪಡಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

- Advertisement -

Latest News

error: Content is protected !!