Friday, June 5, 2026
Homeಕರಾವಳಿಬೆಳ್ತಂಗಡಿ : ಬಳೆಂಜದ ಯುವಕ ಮಂಗಳೂರಿನಲ್ಲಿ ಆತ್ಮಹತ್ಯೆ

ಬೆಳ್ತಂಗಡಿ : ಬಳೆಂಜದ ಯುವಕ ಮಂಗಳೂರಿನಲ್ಲಿ ಆತ್ಮಹತ್ಯೆ

- Advertisement -
- Advertisement -

ಬೆಳ್ತಂಗಡಿ : ಬಳಂಜ ಗ್ರಾಮ ಯುವಕನೋರ್ವ ಮಂಗಳೂರಿನಲ್ಲಿ ನೇಣಿಗೆ ಶರಣಾಗಿದ್ದಾನೆ. ಬಂಟ ಗ್ರಾಮ ಸಮಿತಿ  ಬಳಂಜ ಇದರ ಮಾಜಿ  ಅಧ್ಯಕ್ಷರು ಮತ್ತು ಬೆಳ್ತಂಗಡಿ ತಾಲೂಕು ಬಂಟರ ಸಂಘದ ಮಾಜಿ ನಿರ್ದೇಶಕರಾದ ರಮಾನಾಥ ಶೆಟ್ಟಿ ಪಂಬಾಜೆ  ಇವರ ಮಗ ರಾಜಿತ್ ಶೆಟ್ಟಿ (22 ವ) ಆತ್ಮಹತ್ಯೆಗೆ ಶರಣಾದ ಯುವಕ.

ಈತ ಮಂಗಳೂರಿನಲ್ಲಿ ಕಳೆದ ಒಂದು ವರ್ಷದಿಂದ ಹೊಟೇಲ್ ಮ್ಯಾನೇಜ್‌ಮೆಂಟ್ ಕೋರ್ಸು ಮಾಡುತ್ತಿದ್ದ.  ಮಂಗಳೂರಿನಲ್ಲಿ ತನ್ನ ರೂಮಿನಲ್ಲಿ ಈತ ಆತ್ಮಹತ್ಯೆಗೆ ಶರಣಾಗಿದ್ದಾನೆ. ಈ ಬಗ್ಗೆ ಮಂಗಳೂರಿನ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ. ಆತ್ಮಹತ್ಯೆಗೆ ಕಾರಣ ಇನ್ನಷ್ಟೇ ತಿಳಿಯಬೇಕಿದೆ.

ರಾಜಿತ್ ಬೆಳ್ತಂಗಡಿಯಲ್ಲಿ ಡಿಪ್ಲೋಮ ವಿದ್ಯಾಭ್ಯಾಸ ಪಡೆದು ಒಂದು ವರ್ಷದ ಹಿಂದೆ ಮಂಗಳೂರಿನಲ್ಲಿ ಹೋಟೆಲ್ ಮ್ಯಾನೇಜ್‌ಮೆಂಟ್ ಕೋರ್ಸು ಮಾಡುತ್ತಿದ್ದ. ಎಲ್ಲರೊಂದಿಗೆ ಸ್ನೇಹದಿಂದ ಇದ್ದು, ಓರ್ವ ಉತ್ತಮ ವಾಲಿಬಾಲ್ ಆಟಗಾರರಾಗಿದ್ದು, ನಿರೂಪಣೆ, ಡ್ಯಾನ್ಸ್ ನಟನೆಯಲ್ಲಿ ಸೈ ಎನಿಸಿಕೊಂಡಿದ್ದ. ಯತ್ನ ಕಿರುಚಿತ್ರ ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರನಾಗಿದ್ದ.

- Advertisement -

Latest News

error: Content is protected !!