Monday, July 13, 2026
Homeಕರಾವಳಿ₹26.18 ಕೋಟಿ ವೆಚ್ಚದಲ್ಲಿ ನವೀಕೃತಗೊಂಡ ಬಂಟ್ವಾಳ ರೈಲು ನಿಲ್ದಾಣ: ಜುಲೈ 17ಕ್ಕೆ ಉದ್ಘಾಟನೆ

₹26.18 ಕೋಟಿ ವೆಚ್ಚದಲ್ಲಿ ನವೀಕೃತಗೊಂಡ ಬಂಟ್ವಾಳ ರೈಲು ನಿಲ್ದಾಣ: ಜುಲೈ 17ಕ್ಕೆ ಉದ್ಘಾಟನೆ

- Advertisement -
- Advertisement -

ಬಂಟ್ವಾಳ: ಬರೋಬ್ಬರಿ ₹26.18 ಕೋಟಿ ವೆಚ್ಚದಲ್ಲಿ ಅತ್ಯಾಧುನಿಕವಾಗಿ ಪುನರ್ ಅಭಿವೃದ್ಧಿಗೊಂಡಿರುವ ಬಂಟ್ವಾಳ ರೈಲು ನಿಲ್ದಾಣವು ಜುಲೈ 17 ರಂದು ಉದ್ಘಾಟನೆಗೊಳ್ಳಲಿದೆ ಎಂದು ನೈರುತ್ಯ ರೈಲ್ವೆಯ ಮೈಸೂರು ವಿಭಾಗದ ಸಾರ್ವಜನಿಕ ಸಂಪರ್ಕಾಧಿಕಾರಿ ಗಿರೀಶ ಧರ್ಮರಾಜ ಕಲಗೊಂಡ ತಿಳಿಸಿದ್ದಾರೆ.

ಪ್ರಯಾಣಿಕರ ಸೌಕರ್ಯಗಳನ್ನು ಹೆಚ್ಚಿಸುವುದು ಮತ್ತು ನಿಲ್ದಾಣದ ಮೂಲಸೌಕರ್ಯಗಳನ್ನು ಆಧುನೀಕರಣಗೊಳಿಸುವ ಉದ್ದೇಶದಿಂದ ಈ ಯೋಜನೆ ಕೈಗೊಳ್ಳಲಾಗಿದ್ದು, ಹೊಸ ನಿಲ್ದಾಣದಲ್ಲಿ ಕೋಚ್ ಮತ್ತು ರೈಲು ಇಂಡಿಕೇಷನ್ ಬೋರ್ಡ್‌ಗಳು, ಸುಧಾರಿತ ಸಾರ್ವಜನಿಕ ಘೋಷಣೆ ವ್ಯವಸ್ಥೆ ಹಾಗೂ ಡಿಜಿಟಲ್ ಗಡಿಯಾರಗಳನ್ನು ಅಳವಡಿಸಲಾಗಿದೆ.

ಒಟ್ಟಾರೆಯಾಗಿ ಬಂಟ್ವಾಳ ರೈಲು ನಿಲ್ದಾಣವನ್ನು ಆರಾಮದಾಯಕ, ಪರಿಣಾಮಕಾರಿ ಮತ್ತು ಪ್ರಯಾಣಿಕ ಸ್ನೇಹಿ ಕೇಂದ್ರವಾಗಿ ಪರಿವರ್ತಿಸಲಾಗಿದ್ದು, ಮಾಧ್ಯಮಗಳಿಗೆ ಮಾಹಿತಿ ನೀಡಿದ ಈ ಸಂದರ್ಭದಲ್ಲಿ ಹಿರಿಯ ಪ್ರಚಾರ ನಿರೀಕ್ಷಕರಾದ ಎಚ್. ಶಿವಕುಮಾರ್ ಮತ್ತು ಮನು ಎಚ್.ಆರ್ ಉಪಸ್ಥಿತರಿದ್ದರು.

- Advertisement -

Latest News

error: Content is protected !!