- Advertisement -


- Advertisement -
ಬೆಂಗಳೂರು: ವಸ್ತುಗಳನ್ನು ವಿತರಣೆ ಮಾಡುವ ನೆಪದಲ್ಲಿ ಒಂಟಿ ಮಹಿಳೆಯಿದ್ದ ಫ್ಲ್ಯಾಟ್‌ಗೆ ಬಲವಂತವಾಗಿ ನುಗ್ಗಿ ಅಸಭ್ಯವಾಗಿ ವರ್ತಿಸಿದ ಡೆಲಿವರಿ ಬಾಯ್‌ನನ್ನು ಮಾರತ್‌ಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ವಿಜಯ್ ಮಲ್ಲಿಕಾರ್ಜುನ್ ಕಾಮತ್ (22) ಎಂದು ಗುರುತಿಸಲಾಗಿದೆ. ಬುಕ್ ಮಾಡಿದ ವಸ್ತುವನ್ನು ತಲುಪಿಸಲು ಬಂದಿದ್ದ ಈತ ಶೌಚಾಲಯ ಬಳಸಲು ಅನುಮತಿ ಕೇಳಿದ್ದು, ಮಹಿಳೆ ನಿರಾಕರಿಸಿ ಪಕ್ಕದ ಮನೆಯವರನ್ನು ಸಂಪರ್ಕಿಸಲು ತಿಳಿಸಿದ್ದಾರೆ.
ಆದರೆ, ಮಹಿಳೆಯ ಮಾತನ್ನು ಲೆಕ್ಕಿಸದೆ ಬಲವಂತವಾಗಿ ಮನೆಗೆ ನುಗ್ಗಿದ ಆರೋಪಿ, ಶೌಚಾಲಯದಿಂದ ಹೊರಬಂದ ತಕ್ಷಣ ಮಹಿಳೆಯ ಎದುರು ವಿಕೃತವಾಗಿ ವರ್ತಿಸಿದ್ದಾನೆ. ಈ ಕುರಿತು ಮಹಿಳೆ ನೀಡಿದ ದೂರಿನ ಮೇರೆಗೆ ಕಾರ್ಯಪ್ರವೃತ್ತರಾದ ಮಾರತ್‌ಹಳ್ಳಿ ಠಾಣೆ ಪೊಲೀಸರು, ಭಾರತೀಯ ನ್ಯಾಯ ಸಂಹಿತೆಯ (BNS) ಕಲಂ 75, 79 ಹಾಗೂ 329 (2)ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.
- Advertisement -


