Saturday, May 18, 2024
Homeಪ್ರಮುಖ-ಸುದ್ದಿಕರ್ನಾಟಕದಲ್ಲಿ ಭಾನುವಾರದ ಲಾಕ್ ಡೌನ್ ತೆರವು ಸಾಧ್ಯತೆ?

ಕರ್ನಾಟಕದಲ್ಲಿ ಭಾನುವಾರದ ಲಾಕ್ ಡೌನ್ ತೆರವು ಸಾಧ್ಯತೆ?

spot_img
- Advertisement -
- Advertisement -

ಬೆಂಗಳೂರು : ರಾಜ್ಯದಲ್ಲಿ  ಭಾನುವಾರದ ಲಾಕ್ ಡೌನ್ ತೆರವು ಮಾಡಲಾಗುತ್ತದೆ. ಆಗಸ್ಟ್ 2 ರ ಭಾನುವಾರ ಲಾಕ್ ಡೌನ್ ಇರಲಿದ್ದು, ಬಳಿಕ ತೆರವುಗೊಳ್ಳುವ ಸಾಧ್ಯತೆ ಇದೆ.

ಭಾನುವಾರದ ಲಾಕ್ ಡೌನ್ ತೆರವು ಮಾಡುವ ಬಗ್ಗೆ ಕರ್ನಾಟಕ ಸರ್ಕಾರ ಚಿಂತನೆ ನಡೆಸಿದೆ. ಕೇಂದ್ರ ಗೃಹ ಇಲಾಖೆ ಲಾನ್ ಲಾಕ್ ಮಾರ್ಗಸೂಚಿಯನ್ನು ಎರಡು ದಿನದಲ್ಲಿ ಬಿಡುಗಡೆ ಮಾಡುವ ಸಾಧ್ಯತೆ ಇದೆ.

ಕೇಂದ್ರದ ಮಾರ್ಗಸೂಚಿ ಪ್ರಕಟವಾದ ಬಳಿಕ ರಾಜ್ಯ ಸರ್ಕಾರ ಭಾನುವಾರದ ಲಾಕ್ ಡೌನ್ ತೆರವು ಮಾಡುವ ಬಗ್ಗೆ ತೀರ್ಮಾನ ಮಾಡಲಿದೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಭಾನುವಾರದ ಲಾಕ್ ಡೌನ್ ಜಾರಿಯಲ್ಲಿರುತ್ತದೆ.

ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಭಾನುವಾರದ ಲಾಕ್ ಡೌನ್‌ನಿಂದ ಆಗುತ್ತಿರುವ ಲಾಭವೇನು? ಎಂದು ಅಧಿಕಾರಿಗಳ ಬಳಿ ವರದಿ ಕೇಳಿದ್ದಾರೆ. ಮುಖ್ಯಮಂತ್ರಿಗಳೇ ಲಾಕ್ ಡೌನ್ ಮುಂದುವರೆಸುವ ಕುರಿತು ಆಸಕ್ತಿ ಹೊಂದಿಲ್ಲ.

ಭಾನುವಾರದ ಲಾಕ್ ಡೌನ್ ಎಂದರೆ ಶನಿವಾರ ರಾತ್ರಿ 9 ಗಂಟೆಯಿಂದ ಸೋಮವಾರ ಮುಂಜಾನೆ 5 ಗಂಟೆಯ ತನಕ ಕರ್ಫ್ಯೂ ಜಾರಿಯಲ್ಲಿರುತ್ತದೆ. ಸಾರಿಗೆ ಸಂಚಾರ ಸಂಪೂರ್ಣವಾಗಿ ಬಂದ್ ಆಗುತ್ತದೆ. ಅಗತ್ಯ ಸೇವೆಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಅಂಗಡಿಗಳು ಬಂದ್ ಆಗಿರುತ್ತದೆ.

- Advertisement -
spot_img

Latest News

error: Content is protected !!