Wednesday, June 3, 2026
HomeUncategorizedಬೆಳ್ತಂಗಡಿಯಲ್ಲಿ ಜಲಪಾತ ನೋಡುತ್ತಿದ್ದಂತೆ ಗುಡ್ಡ ಕುಸಿತ: ಮಣ್ಣಿನಡಿ ಸಿಲುಕಿ ಉಜಿರೆಯ ಯುವಕ ಸಾವು

ಬೆಳ್ತಂಗಡಿಯಲ್ಲಿ ಜಲಪಾತ ನೋಡುತ್ತಿದ್ದಂತೆ ಗುಡ್ಡ ಕುಸಿತ: ಮಣ್ಣಿನಡಿ ಸಿಲುಕಿ ಉಜಿರೆಯ ಯುವಕ ಸಾವು

- Advertisement -
- Advertisement -

ಬೆಳ್ತಂಗಡಿ: ಜಲಪಾತ ನೋಡೋದಕ್ಕೆ ತೆರಳಿದವರು‌ ಜಲಪಾತ ನೋಡುತ್ತಿದ್ದಂತೆ ಗುಡ್ಡ‌ ಕುಸಿದು ಮೂವರು ಮಣ್ಣಿನಡಿ‌ ಸಿಲುಕಿದ ಘಟನೆ ಇಂದು ಮಧ್ಯಾಹ್ನ  ಬೆಳ್ತಂಗಡಿ ತಾಲೂಕಿನ ಮಲವಂತಿಗೆ ಗ್ರಾಮದ ಬಂಗಾರ್ ಪಲ್ಕೆ ಎಂಬಲ್ಲಿ ನಡೆದಿದೆ..

ಅರಣ್ಯ ಪ್ರದೇಶದ ಒಳಗಡೆ ಇರುವ ಜಲಪಾತ‌ ನೋಡಲು  ಉಜಿರೆ ಮೂಲದ ನಾಲ್ವರು ಯುವಕರು ತೆರಳಿದ್ದರು. ಈ ವೇಳೆ ಜಲಪಾತದ ಅಂಚಿನ‌ ಗುಡ್ಡ ದಿಢೀರನೆ ಕುಸಿತ ಉಂಟಾಗಿ ಮೂವರು ಮಣ್ಣಿನಡಿಯಲ್ಲಿ ಸಿಲುಕಿದ್ದಾರೆ.

ಮೂವರಲ್ಲಿ ಒಬ್ಬರು ಮಣ್ಣಿನಡಿಯಲ್ಲಿ ಸಿಲುಕಿ ಕಾಣೆಯಾಗಿದ್ದು ಇನ್ನಿಬ್ಬರು ಅಪಾಯದಿಂದ ಪಾರಾಗಿದ್ದಾರೆ. ಮೃತಪಟ್ಟ ವ್ಯಕ್ತಿ ಉಜಿರೆ ಮೂಲದ ಕಾಶಿಬೆಟ್ಟು , ನಿವಾಸಿ ಎಂದು ಗುರುತಿಸಲಾಗಿದ್ದು ಮೃತದೇಹವನ್ನು ಮಣ್ಣಿನ ಅಡಿಯಿಂದ ತೆಗೆಯೋ ಕಾರ್ಯಾಚರಣೆ ನಡೆಯುತ್ತಿದೆ.

- Advertisement -

Latest News

error: Content is protected !!