Thursday, June 4, 2026
Homeತಾಜಾ ಸುದ್ದಿಮೀನು ಸಾಗಾಟದ ಸೋಗಿನಲ್ಲಿ ಮಂಗಳೂರಿಗೆ ಅಕ್ರಮ ದನದ ಮಾಂಸ ಸಾಗಾಟಕ್ಕೆ ಯತ್ನ

ಮೀನು ಸಾಗಾಟದ ಸೋಗಿನಲ್ಲಿ ಮಂಗಳೂರಿಗೆ ಅಕ್ರಮ ದನದ ಮಾಂಸ ಸಾಗಾಟಕ್ಕೆ ಯತ್ನ

- Advertisement -
- Advertisement -

ಹಾಸನ: ಮೀನು ಸಾಗಾಟದ ಸೋಗಿನಲ್ಲಿ ಮಂಗಳೂರಿಗೆ ಗೋ ಮಾಂಸ ತರುತ್ತಿದ್ದ ಏಳು ವಾಹನಗಳನ್ನು ವಶಕ್ಕೆ ಪಡೆದು, ಓರ್ವನನ್ನ ಬಂಧಿಸಿದ ಘಟನೆ ಹಾಸನ ಜಿಲ್ಲೆಯ ಆಲೂರಿನ ಪ್ರಕೃತಿ ನಗರದಲ್ಲಿ ನಡೆದಿದೆ.

ಮೀನು ಸಾಗಾಟದ ಟೆಂಪೋದಲ್ಲಿ ಪ್ಲಾಸ್ಟಿಕ್ ಪ್ಯಾಕ್ ನಲ್ಲಿ ಸುತ್ತಿಟ್ಟ ಬರೋಬ್ಬರಿ ನಾಲ್ಕು ಟನ್ ಮಾಂಸ ಪತ್ತೆಯಾಗಿದ್ದು, ಮಾಂಸವನ್ನು ಮಂಗಳೂರಿನ ಮಾರುಕಟ್ಟೆಗೆ ತರಲಾಗುತ್ತಿತ್ತು ಎನ್ನಲಾಗಿದೆ. ಇದರ ಖಚಿತ ಮಾಹಿತಿಯ ಆಧಾರದಲ್ಲಿ ಆಲೂರಿನ ಪ್ರಕೃತಿ ನಗರದ ಶೆಡ್ ಒಂದಕ್ಕೆ ದಾಳಿ ನಡೆಸಿದ್ದು ಈ ವೇಳೆ ಅಲ್ಲಿದ್ದ ಆರೋಪಿಗಳು ವಾಹನ ಬಿಟ್ಟು ಪರಾರಿಯಾಗಿದ್ದಾರೆ ಎನ್ನಲಾಗಿದೆ.

ಬಳಿಕ ಪೊಲೀಸರು ಶೆಡ್ ನ ಸುತ್ತಮುತ್ತ ತನಿಖೆ ನಡೆಸಿದಾಗ ಮುನ್ನ ಎಂಬಾತ ಪೊದೆಗಳ ನಡುವೆ ಅವಿತಿದ್ದು, ಪೋಲಿಸರು ಆತನನ್ನು ವಶಕ್ಕೆ ಪಡೆದಿದ್ದಾರೆ. ಉಳಿದ ಆರೋಪಿಗಳಿಗಾಗಿ ಶೋಧಕಾರ್ಯ ಮುಂದುವರೆದಿದೆ.

- Advertisement -

Latest News

error: Content is protected !!