Thursday, June 4, 2026
Homeತಾಜಾ ಸುದ್ದಿಬಿಎಸ್‍ವೈಗೆ ಸಪ್ತ ಸಚಿವರ ಕಾಟ: ಮೂವರು ಸಚಿವರ ಖಾತೆಗಳಲ್ಲಿ ಮತ್ತೆ ಬದಲಾವಣೆ

ಬಿಎಸ್‍ವೈಗೆ ಸಪ್ತ ಸಚಿವರ ಕಾಟ: ಮೂವರು ಸಚಿವರ ಖಾತೆಗಳಲ್ಲಿ ಮತ್ತೆ ಬದಲಾವಣೆ

- Advertisement -
- Advertisement -

ಬೆಂಗಳೂರು: ಖಾತೆ ಮರು ಹಂಚಿಕೆಯಿಂದ ಉಂಟಾಗಿರುವ ಅಸಮಾಧಾನ ಶಮನಗೊಳಿಸಲು ಮುಂದಾಗಿರುವ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಸಂಪುಟದ ಸಚಿವರುಗಳ ಖಾತೆಯಲ್ಲಿ ಮತ್ತೆ ಬದಲಾವಣೆ ಮಾಡಿದ್ದಾರೆ. ಡಾ.ಕೆ ಸುಧಾಕರ್, ಮಾಧುಸ್ವಾಮಿ ಮತ್ತು ಆನಂದ್ ಸಿಂಗ್ ಅವರುಗಳ ಖಾತೆಯನ್ನು ಬದಲಾವಣೆ ಮಾಡಲಾಗಿದೆ. ಇದಕ್ಕೆ ರಾಜ್ಯಪಾಲರ ಅಂಕಿತವೂ ದೊರೆತಿದೆ.

ಆರೋಗ್ಯ ಸಚಿವ ಕೆ ಸುಧಾಕರ್ ಗೆ ಮತ್ತೆ ವೈದ್ಯಕೀಯ ಶಿಕ್ಷಣ ಖಾತೆ ನೀಡಲಾಗಿದೆ. ಮೊನ್ನೆ ಖಾತೆ ಬದಲಾವಣೆ ಸಂದರ್ಭದಲ್ಲಿ ಈ ಖಾತೆಯನ್ನು ಮಾಧುಸ್ವಾಮಿಯವರಿಗೆ ನೀಡಲಾಗಿತ್ತು. ವೈದ್ಯಕೀಯ ಶಿಕ್ಷಣ ಸಚಿವರಾಗಿದ್ದ ಜೆ ಸಿ ಮಾಧುಸ್ವಾಮಿ ಅವರಿಗೆ ಖಾತೆ ಬದಲಾವಣೆ ಮಾಡಿ ಪ್ರವಾಸೋದ್ಯಮ, ಪರಿಸರ ಖಾತೆ ಮತ್ತು ಪರಿಸರ ವಿಜ್ಞಾನ ಖಾತೆಯನ್ನು ನೀಡಲಾಗಿದೆ. ಪ್ರವಾಸೋದ್ಯ ಸಚಿವರಾಗಿದ್ದ ಆನಂದ್ ಸಿಂಗ್ ಅವರಿಗೆ ಮೂಲಸೌಕರ್ಯ ಅಭಿವೃದ್ಧಿ ಇಲಾಖ ಹಾಗೂ ಹಜ್ ಮತ್ತು ವಕ್ಫ್ ಖಾತೆ ನೀಡಲಾಗಿದೆ.

ಪ್ರವಾಸೋದ್ಯಮ ಮತ್ತು ಪರಿಸರ ಖಾತೆ ಬದಲಾವಣೆಯಿಂದ ಆನಂದ್‌ ಸಿಂಗ್ ತೀವ್ರ ಅಸಮಾಧಾನಗೊಂಡಿದ್ದು, ಈ ಬಗ್ಗೆ ಮುಖ್ಯಮಂತ್ರಿ ಬಳಿ ಚರ್ಚೆ ನಡೆಸಿದ್ದರು ಎನ್ನಲಾಗಿದೆ. ‘ಅರಣ್ಯ ಖಾತೆ ಬದಲಿಸಿ ಪ್ರವಾಸೋದ್ಯಮ ಮತ್ತು ಪರಿಸರ ಖಾತೆ ನೀಡಿದ್ದೀರಿ. ಇದೀಗ ಅದನ್ನೂ ಬದಲಾಯಿಸಿದ್ದೀರಿ. ಸಚಿವ ಸ್ಥಾನವೇ ಬೇಡ’ ಎಂದು ರಾಜೀನಾಮೆ ನೀಡುವುದಾಗಿಯೂ ಹೇಳಿಕೊಂಡಿದ್ದಾರೆ ಎಂದೂ ಹೇಳಲಾಗಿದೆ.

- Advertisement -

Latest News

error: Content is protected !!