Friday, May 10, 2024
Homeಕ್ರೀಡೆಕೊರೊನಾ ಸೋಂಕಿಗೆ ತುತ್ತಾಗಿದ್ದ ಫುಟ್​ಬಾಲ್​​ ಆಟಗಾರರು ವಿಮಾನ ದುರಂತದಲ್ಲಿ ಸಾವು..!

ಕೊರೊನಾ ಸೋಂಕಿಗೆ ತುತ್ತಾಗಿದ್ದ ಫುಟ್​ಬಾಲ್​​ ಆಟಗಾರರು ವಿಮಾನ ದುರಂತದಲ್ಲಿ ಸಾವು..!

spot_img
- Advertisement -
- Advertisement -

ಬ್ರೆಜಿಲ್: ಕೊರೊನಾ ವೈರಸ್​ ಸೋಂಕಿಗೆ ಒಳಗಾದ ಬಳಿಕ ಪ್ರತ್ಯೇಕವಾಗಿ ಪ್ರಯಾಣಿಸುತ್ತಿದ್ದ ಬ್ರೆಜಿಲ್​ ಕ್ಲಬ್​ ಪಾಲ್ಮಾಸ್​ ಫುಟ್​​ಬಾಲ್​ ಆಟಗಾರರಿದ್ದ ಲಘು ವಿಮಾನ ಟೊಕಾಂಟಿನ್ಸ್ ರಾಜ್ಯದಲ್ಲಿ ಅಪಘಾತಕ್ಕೀಡಾಗಿದ್ದು ಆರು ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

‘ಲ್ಯೂಕಾಸ್ (ಮೈರಾ, ಕ್ಲಬ್ ಅಧ್ಯಕ್ಷ), ಪೈಲಟ್ ವ್ಯಾಗ್ನರ್ ಮತ್ತು ಫುಟ್ಬಾಲ್ ಆಟಗಾರರಾದ ಲ್ಯೂಕಾಸ್ ಪ್ರಾಕ್ಸೆಡಿಸ್, ಗಿಲ್ಹೆರ್ಮ್ ನೋ, ರಾನುಲೆ ಮತ್ತು ಮಾರ್ಕಸ್ ಮೊಲಿನಾರಿ ಅವರನ್ನು ಕರೆದೊಯ್ಯುವ ವಿಮಾನವು ಉತ್ತರ ರಾಜ್ಯದ ಟೊಕಾಂಟಿನ್ಸ್​ನಲ್ಲಿ ಟೇಕಾಫ್​ ಆಗುತ್ತಿದ್ದ ವೇಳೆ ಇದಕ್ಕಿದ್ದಂತೆ ರನ್​​ವೇ ಕಡೆ ನುಗ್ಗಿದ ವಿಮಾನ ಅಪಘಾತಕ್ಕೀಡಾಗಿದೆ.

ಕೊರೊನಾ ಸೋಂಕಿಗೆ ಒಳಗಾಗಿದ್ದ ಕಾರಣ ಈ ಆಟಗಾರರು ವಿಲಾನೋವಾ ವಿರುದ್ಧದ ಪಂದ್ಯಕ್ಕೆ ಗೋಯಾನಿಯಾಗೆ ಖಾಸಗಿ ವಿಮಾನದಲ್ಲಿ ಪ್ರತ್ಯೇಕವಾಗಿ ಪ್ರಯಾಣಿಸುತ್ತಿದ್ದರು ಎಂದು ಕ್ಲಬ್​ ವಕ್ತಾರ ಇಜಾಬೆಲಾ ಮಾರ್ಟಿನ್ಸ್ ಹೇಳಿದ್ದಾರೆ.

ಪಲ್ಮಾಸ್‌ನಿಂದ 800 ಕಿಲೋಮೀಟರ್ ದೂರದ ಗೊಯಾನಿಯಾದಲ್ಲಿ ಸೋಮವಾರ ನಡೆಯಲಿದ್ದ ವಿಲಾ ನೋವಾ ತಂಡದ ಎದುರಿನ ಪಂದ್ಯದಲ್ಲಿ ಪಾಲ್ಗೊಳ್ಳಲು ಆಟಗಾರರು ತೆರಳುತ್ತಿದ್ದರು. ಪಲ್ಮಾಸ್‌ ಬಳಿಯ ಕಿರು ವಾಯುನೆಲೆ ಟೆಕಾಟಿನೆನ್ಸ್‌ ಏವಿಯೇಷನ್ ಅಸೋಸಿಯೇಷನ್‌ನಿಂದ ಟೇಕ್ ಆಫ್‌ ಆದ ಕೆಲವೇ ಕ್ಷಣಗಳಲ್ಲಿ ವಿಮಾನ ಪತನಗೊಂಡಿತು.

ಈ ಹಿಂದೆ 2016ರಲ್ಲಿ ಮೆಡಿಲಿನ್‌ ಹೊರವಲಯದ ಗುಡ್ಡದಲ್ಲಿ ಸಂಭವಿಸಿದ ವಿಮಾನ ಅಪಘಾತದಲ್ಲಿ ತಂಡವೊಂದರ ಎಲ್ಲ ಆಟಗಾರರು ಅಸುನೀಗಿದ್ದರು. ಗೊಯಾಸ್‌ನಲ್ಲಿ ಎರಡು ವರ್ಷಗಳ ಹಿಂದೆ ಹೆಲಿಕಾಪ್ಟರ್ ಪತನಗೊಂಡ ಕಾರಣ ಬ್ರೆಜಿಲ್ ತಂಡದ ಮಾಜಿ ಫರ್ನಾಂಡೊ ನಿಧನರಾಗಿದ್ದರು.

- Advertisement -
spot_img

Latest News

error: Content is protected !!