Thursday, June 4, 2026
Homeತಾಜಾ ಸುದ್ದಿಜೈಲಿನಲ್ಲಿ ಹೆಚ್ ಡಿ ರೇವಣ್ಣ ಆರೋಗ್ಯದಲ್ಲಿ ಏರುಪೇರು

ಜೈಲಿನಲ್ಲಿ ಹೆಚ್ ಡಿ ರೇವಣ್ಣ ಆರೋಗ್ಯದಲ್ಲಿ ಏರುಪೇರು

- Advertisement -
- Advertisement -

ಬೆಂಗಳೂರು: ಸಂತ್ರಸ್ತೆಯ ಅಪಹರಣ ಪ್ರಕರಣದಲ್ಲಿ ಜೆಡಿಎಸ್ ಶಾಸಕ ಎಚ್.ಡಿ.ರೇವಣ್ಣ ಜೈಲುಪಾಲಾಗಿದ್ದಾರೆ. ಅವರಿಗೆ 7 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿ ನಿನ್ನೆ  ಬೆಂಗಳೂರಿನ 17ನೇ ಎಸಿಎಂಎಂ ನ್ಯಾಯಾಲಯ ಆದೇಶ ಹೊರಡಿಸಿತ್ತು. ಈ ಬೆನ್ನಲ್ಲೇ ಅವರನ್ನು ಪರಪ್ಪನ ಅಗ್ರಹಾರ ಜೈಲಿಗೆ ಶಿಫ್ಟ್ ಮಾಡಲಾಗಿತ್ತು.

ಸದ್ಯ ಜೈಲಿನಲ್ಲಿರುವ ರೇವಣ್ಣ ಆರೋಗ್ಯದಲ್ಲಿ ಏರುಪೇರು ಉಂಟಾಗಿದೆ ಎನ್ನಲಾಗಿದೆ. ರೇವಣ್ಣನವರಿಗೆ ಹೊಟ್ಟೆ ನೋವು ಕಾಣಿಸಿಕೊಂಡಿದೆ ಎನ್ನಲಾಗಿದ್ದು, ಸದ್ಯ ಅವರಿಗೆ ಜೈಲಿನ ವೈದ್ಯರೇ ಚಿಕಿತ್ಸೆ ನೀಡಿದ್ದಾರೆ ಎನ್ನಲಾಗಿದೆ.

ಇನ್ನು ಮೊನ್ನೆಯಷ್ಟೇ ಎದೆನೋವು ಹಾಗೂ ಹೊಟ್ಟೆನೋವು ಕಾಣಿಸಿಕೊಂಡ ಹಿನ್ನೆಲೆ ರೇವಣ್ಣ ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು.

- Advertisement -

Latest News

error: Content is protected !!