Tuesday, June 9, 2026
Homeಕರಾವಳಿಮದುವೆ ಸಮಾರಂಭದಲ್ಲಿ ಹುಡುಗಿಯರ ಫೋಟೋ ಕ್ಲಿಕ್ಕಿಸಿದ ಅಪರಿಚಿತ ಯುವಕರು; ಫೋಟೋ ತೆಗೆದವರಿಗೆ ಸಿಕ್ಕಿತು ಧರ್ಮದೇಟು..!

ಮದುವೆ ಸಮಾರಂಭದಲ್ಲಿ ಹುಡುಗಿಯರ ಫೋಟೋ ಕ್ಲಿಕ್ಕಿಸಿದ ಅಪರಿಚಿತ ಯುವಕರು; ಫೋಟೋ ತೆಗೆದವರಿಗೆ ಸಿಕ್ಕಿತು ಧರ್ಮದೇಟು..!

- Advertisement -
- Advertisement -

ಪುತ್ತೂರು: ಆಮಂತ್ರಣ ಪತ್ರಿಕೆಯಿಲ್ಲದೆಯೇ ಸಮಾರಂಭಕ್ಕೆ ಆಗಮಿಸಿದ್ದ ಇಬ್ಬರು ಯುವಕರು ಕದ್ದು ಮುಚ್ಚಿ ಸಿಕ್ಕ ಸಿಕ್ಕ ಹುಡುಗಿಯರ ಫೋಟೋ ಕ್ಲಿಕ್ಕಿಸಿ ರೆಡ್‌ಹ್ಯಾಂಡ್‌ ಆಗಿ ಸಿಕ್ಕಿ ಬಿದ್ದು, ಅಲ್ಲಿದ್ದವರಿಂದ ಧರ್ಮದೇಟು ತಿಂದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. 

ಈ ಕುರಿತು ಸಂತ್ರಸ್ತ ಮಹಿಳೆಯೊಬ್ಬರು ಫೇಸ್ ಬುಕ್ ನಲ್ಲಿ ಹಂಚಿಕೊಂಡ ಪೋಸ್ಟ್‌ ವೈರಲ್‌ ಆಗಿದೆ.

ಘಟನೆಯ ವಿವರ: ಪುತ್ತೂರು ಕಾವು ದೇವಸ್ಥಾನವೊಂದರ ಸಭಾಭವನದಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಸಂಬಂಧವೇ ಇಲ್ಲದ ಅಪರಿಚಿತ ವ್ಯಕ್ತಿ ಗಳಿಬ್ಬರು ಬಂದು ಹುಡುಗಿಯರ ಫೋಟೋ ತೆಗೆಯುತ್ತಿದ್ದರು. ಇದನ್ನು ಗಮನಿಸಿದ ಮಹಿಳೆಯೊಬ್ಬರು ಅಪರಿಚಿತ ವ್ಯಕ್ತಿಯೊಬ್ಬರ ಮೊಬೈಲ್‌ ಕಸಿದುಕೊಂಡಿದ್ದಾರೆ. ಪರಿಶೀಲಿಸಿದಾಗ ಗ್ಯಾಲರಿಯಲ್ಲಿ ನೂರಾರು ಹುಡುಗಿಯರ ಪೋಟೋ ಇರುವುದು ಬೆಳಕಿಗೆ ಬಂದಿದೆ.

ಈ ಕುರಿತು ನೆರೆದಿದ್ದವರು ವಿಚಾರಿಸಿದಾಗ ಸಂಪ್ರ ದಾಯಸ್ಥರೊಬ್ಬರ ಪುತ್ರ ಹೇಳಿದ್ದಕ್ಕಾಗಿ ಫೋಟೋ ಕ್ಲಿಕ್ಕಿಸಿದ್ದೇವೆ ಎಂದು ಹೇಳಿದ್ದಾರೆ. ಏಟು ತಿಂದವರು ತಪ್ಪೊಪ್ಪಿಕೊಂಡು ಕಾಲ್ಕಿತ್ತಿದ್ದಾರೆ ಎಂದು ಪೋಸ್ಟ್ ನಲ್ಲಿ ಹಂಚಿಕೊಂಡಿದ್ದರು.

- Advertisement -

Latest News

error: Content is protected !!