Sunday, June 7, 2026
Homeಕರಾವಳಿಉಡುಪಿಬಾವಿ ಸ್ವಚ್ಛ ಮಾಡಲು ಇಳಿದ ಇಬ್ಬರು ವ್ಯಕ್ತಿಗಳ ಪೈಕಿ ಓರ್ವ ಸಾವು; ಇನ್ನೋರ್ವನ ರಕ್ಷಣೆ

ಬಾವಿ ಸ್ವಚ್ಛ ಮಾಡಲು ಇಳಿದ ಇಬ್ಬರು ವ್ಯಕ್ತಿಗಳ ಪೈಕಿ ಓರ್ವ ಸಾವು; ಇನ್ನೋರ್ವನ ರಕ್ಷಣೆ

- Advertisement -
- Advertisement -

ಉಡುಪಿ: ಬ್ರಹ್ಮಾವರ ಮಹಾಲಿಂಗೇಶ್ವರ ದೇವಸ್ಥಾನದ ಹಿಂಭಾಗದಲ್ಲಿರುವ ದೇವಾಡಿಗರ ಬೆಟ್ಟುವಿನಲ್ಲಿ ಬಾವಿ ಸ್ವಚ್ಛ ಮಾಡಲು ಇಳಿದ ಇಬ್ಬರು ವ್ಯಕ್ತಿಗಳ ಪೈಕಿ ಓರ್ವ ಸಾವನ್ನಪ್ಪಿದರೆ ಮತ್ತೊಬ್ಬನನ್ನು ಅಗ್ನಿಶಾಮಕ ದಳದ ಸಿಬಂದಿ ರಕ್ಷಿಸಿದ ಘಟನೆ ಬುಧವಾರ ಸಂಜೆ ಸಂಭವಿಸಿದೆ.

ಸಾವನ್ನಪ್ಪಿದ ವ್ಯಕ್ತಿ ಸ್ಥಳೀಯ ನಿವಾಸಿ ದುರ್ಗೇಶ್ (34). ರಕ್ಷಣೆಗೊಳಗಾದವರು ಅಡಿವೆಪ್ಪ ಕುರಿ (50). ಇಬ್ಬರೂ ಕೊಪ್ಪಳ ಜಿಲ್ಲೆಯವರಾಗಿದ್ದು, ಬ್ರಹ್ಮಾವರದ ಸಾಲಿಕೆರೆಯಲ್ಲಿ ವಾಸಮಾಡಿಕೊಂಡು ಕೂಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.

ಬಾವಿಯು 35 ಅಡಿ ಆಳದಾಗಿತ್ತು, ಕೆಸರು ಇದೆ ಎಂದು ಬಾವಿಯೊಳಗೆ ಬ್ಲೀಚಿಂಗ್‌ ಪೌಡರ್‌ಹಾಕಿ ಸ್ವಚ್ಛ ಮಾಡುತ್ತಿದ್ದರು. ಆಮ್ಲಜನಕ ಕೊರತೆ ಸಾವಿಗೆ ಕಾರಣ ಎನ್ನಲಾಗಿದೆ. ಈ ಕುರಿತು ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!